

ಜಮಖಂಡಿ: ತಾಲೂಕಿನ ಹುನ್ನೂರ-ಮಧುರಖಂಡಿ ಗ್ರಾಮದ ಬಸವ ಜ್ಞಾನ ಗುರುಕುಲದಲ್ಲಿ ಪ್ರತಿ ವರ್ಷ ಡಿ.25 ರಿಂದ 27ರ ವರೆಗೆ ನಡೆಯುತಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮವನ್ನು ಈ ಸಾರಿ ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶರಣ ಡಾ.ಈಶ್ವರ ಮಂಟೂರ ತಿಳಿಸಿದ್ದಾರೆ.
ಆಶ್ರಮದ ಆವರಣದಲ್ಲಿ ಡಿ.27 ರಂದು ಬೆಳಗ್ಗೆ 9 ಗಂಟೆಗೆ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಘೋಡಗೆರೆ ಮೈಗೂರ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಸಮ್ಮುಖದಲ್ಲಿ ಸಂಕ್ಷಿಪ್ತವಾಗಿ ವಚನ ಪಲ್ಲಕ್ಕಿಯನ್ನು ಸರ್ಕಾರದ ನಿಯಮನುಸಾರವಾಗಿ ಸರಳವಾಗಿ ಆಚರಿಸಲಾಗುವುದು. ನಾಡೋಜ ಡಾ.ಎಚ್.ಜಿ.ದಡ್ಡಿ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.