ಜಮಖಂಡಿ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ

JKD 21-1
Published on

ಜಮಖಂಡಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಹಾಗೂ ತಹಸೀಲ್ದಾರ್ ಸಂಜಯ ಇಂಗಳೆ ಜಂಟಿಯಾಗಿ ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯಿತಿಗಳ 496 ಸ್ಥಾನಗಳ ಪೈಕಿ 25 ಗ್ರಾಪಂನ 425 ಸ್ಥಾನಗಳಿಗೆ 233 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 233 ಮತಗಟ್ಟೆಗಳು ಇದ್ದು, ಪಿಆರ್‌ಒ 233, ಎಪಿಆರ್‌ಒ 233, ಪಿಒ 509 ಸೇರಿ ಒಟ್ಟು 975 ಜನ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 21 ಕೆಎಸ್‌ಆರ್‌ಟಿಸಿ ಬಸ್, 13 ಕ್ರೂಸರ್ ವಾಹನಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಓರ್ವ ಡಿವೈಎಸ್‌ಪಿ, 3 ಜನ ಸಿಪಿಐ, 8 ಜನ ಪಿಎಸ್‌ಐ, 25 ಎಎಸ್‌ಐ, 53 ಎಚ್‌ಪಿಸಿ, 117 ಪಿಸಿ, 62 ಗೃಹರಕ್ಷಕ ದಳ, 15 ಪ್ರೊಬೇಷನರಿ ಪಿಸಿ ಸೇರಿ 283 ಸಿಬ್ಬಂದಿಯನ್ನು ಸೂಕ್ತ ಬಂದೋ ಬಸ್ತ್‌ಗೆ ನಿಯೋಜಿಸಲಾಗಿದೆ ಎಂದರು.

ಚುನಾವಣೆಗೆ ಶಿಕ್ಷಣ, ಕಂದಾಯ ಸೇರಿ ವಿವಿಧ ಇಲಾಖೆಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಮತದಾನ ದಿನದಂದು ತಾಲೂಕಿನ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಡಿಸಿ, ಎಸ್ಪಿ, ಚುನಾವಣೆ ವೀಕ್ಷಕರ ಭೇಟಿ
ಜಮಖಂಡಿ ತಾಲೂಕಿನ ಗ್ರಾಪಂ ಚುನಾವಣೆ ಕಾರ್ಯ, ಸಿಬ್ಬಂದಿಯ ವ್ಯವಸ್ಥೆ ನಡೆದ ನಗರದ ಪಿಬಿ ಹೈಸ್ಕೂಲ್‌ಗೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್ ಹಾಗೂ ವೀಕ್ಷಕ ಶಶೀಧರ ಕುರೇರ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ಅಬೀದ ಗದ್ಯಾಳ, ಬಿಇಒ ಸಿ.ಎಂ. ನ್ಯಾಮಗೌಡ, ಸಿಪಿಐ ಡಿ.ಕೆ. ಪಾಟೀಲ, ಪಿಎಸ್‌ಐಗಳಾದ ಜಿ.ಎಸ್. ಪಾಟೀಲ, ಬಸವರಾಜ ಅವಟಿ, ಪುಂಡಲೀಕ ಪಟಾತರ ಇತರರು ಇದ್ದರು.

ಸದಸ್ಯರ ಆಯ್ಕೆಯಲ್ಲಿ ಹರಾಜು ಪ್ರಕರಣಗಳು ಕಂಡುಬಂದಿಲ್ಲ. ಹಣ ಮತ್ತು ಹೆಂಡ ವಿತರಿಸುವುದು ಕಂಡು ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯಲ್ಲಿ ಮೊದಲನೇ ಹಂತದ ಚುನಾವಣೆಯನ್ನು ಶಾಂತಿಯುತವಾಗಿ ಅಚ್ಚುಕಟ್ಟಾಗಿ ನಡೆಸಲು ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
- ಕೆ.ರಾಜೇಂದ್ರ, ಚುನಾವಣಾಧಿಕಾರಿ, ಜಿಲ್ಲಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net