18 ರಂದು ಜಾಗೃತಿ ಸಮಾವೇಶ

JKD 61
Published on

ಜಮಖಂಡಿ: ನಗರದ ಬಸವ ಭವನದಲ್ಲಿ ೆ.18 ರಂದು ಸಂಜೆ 4 ಗಂಟೆಗೆ ರೈತ ಜಾಗರಣ ವೇದಿಕೆ ಹಾಗೂ ಭಾರತೀಯ ಜನತಾ ಪಾರ್ಟಿ ಆಶ್ರಯದಲ್ಲಿ ನೂತನ ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮುಖಂಡ ಬಿ.ಎಸ್.ಸಿಂಧೂರ ತಿಳಿಸಿದರು.

ರಾಜ್ಯಸಭಾ ಸದಸ್ಯ, ರೈತ ಜಾಗರಣ ವೇದಿಕೆ ಸಂಚಾಲಕ ಈರಣ್ಣ ಕಡಾಡಿ ನೂತನ ಕೃಷಿ ಕಾಯ್ದೆಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಸಮಾವೇಶದಲ್ಲಿ 10 ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲೇ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಅವರು ಜಾರಿ ಮಾಡದೆ ಹಾಗೆ ಬಿಟ್ಟಿದ್ದರು. ಇಂದು ಕಾಂಗ್ರೆಸ್‌ನವರೇ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ, ಕೃಷಿ ಕಾಯ್ದೆಗಳನ್ನು ರೈತ ಮುಖಂಡ ಟಿಕಾಯತ್ ಅಂದು ಸ್ವಾಗತಿಸಿದ್ದರು. ಆದರೆ, ಇಂದು ಅವರೇ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.

ರೈತ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಶೈಲೇಶ ಆಪ್ಟೆ ಮಾತನಾಡಿ, ಕೇಂದ್ರ ಸರ್ಕಾರ ರೈತರ ಪರ, ಯುವಕರ ಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ನವರು ಷಡ್ಯಂತ್ರ ನಡೆಸಿದ್ದಾರೆ ಎಂದು ದೂರಿದರು.

ಮುಖಂಡರಾದ ಬಸವರಾಜ ಮರನೂರ, ಸದಾಶಿವ ಕವಟಗಿ, ರವಿ ಐಗಳಿ, ಧರೆಪ್ಪ ಮಂಟೂರ, ಸಿದರಾಯ ಸಾಯಗೊಂಡ, ಪ್ರದೀಪ ಮೆಟಗುಡ್ಡ, ಮಹೇಶ ಖೆಬ್ಬಾನಿ, ಮುತ್ತು ಲಕ್ಕನಗೌಡರ, ಶ್ರೀಶೈಲ ಪಾಟೀಲ, ಪ್ರಭು ಬಾಳಿಕಾಯಿ, ಅಶೋಕ ಬಳೋಲ, ಪ್ರವೀಣ ಕಲ್ಯಾಣಿ, ಹಣಮಂತ ಕರಡಿ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net