ರೈತರ ಹಿತ ನಮ್ಮ ಮುಖ್ಯ ಗುರಿ

JKD NEWS 3-1
Published on

ಜಮಖಂಡಿ: ರೈತರ ಹಿತ ಕಾಪಾಡುವುದು ನಿರಾಣಿ ಉದ್ಯಮ ಸಮೂಹದ ಮುಖ್ಯ ಗುರಿಯಾಗಿದೆ. ನೀರು, ನೆಲ, ರೈತ ನಮ್ಮ ಸಮೂಹದ ಧ್ಯೇಯ ವಾಕ್ಯವಾಗಿದೆ ಎಂದು ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ತಾಲೂಕಿನ ಮೈಗೂರ ಹಿಪ್ಪರಗಿ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ 2019-20 ನೇ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಮತ್ತು ಹೆಚ್ಚು ಕಬ್ಬು ಪೂರೈಸಿದ ರೈತರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಂಆರ್‌ಎನ್ (ನಿರಾಣಿ) ೌಂಡೇಷನ್ ಮೂಲಕ ಸಾವಿರಾರು ಜನರಿಗೆ ಅನುಕೂಲ ಮಾಡಲಾಗಿದೆ. ನಿರಾಣಿ ಸಮೂಹ ಸಂಸ್ಥೆ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ನೀಡಿದೆ ಎಂದರು.

ಕಬ್ಬು ಕಟಾವು ಮತ್ತು ಸಾಗಣೆಯಲ್ಲಿ ವಿಶೇಷ ಸಾಧನೆ ಮಾಡಿದ 100 ರೈತರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.

ಹಿರಿಯ ನ್ಯಾಯವಾದಿ ಜಿ.ಕೆ. ಮಠದ, ಪಿ.ಎನ್. ಪಾಟೀಲ, ರಾಜುಗೌಡ ಪಾಟೀಲ, ಬಾಹುಬಲಿ ಖೋತ, ಮಲ್ಲಪ್ಪ ಪೂಜಾರಿ, ಪುಂಡಲೀಕ ಪಾಲಭಾವಿ, ಟಿ.ಎ. ಬಿರಾದಾರ, ವೆಂಕಣ್ಣ ಗಿಡ್ಡಪ್ಪನವರ, ಬಸವರಾಜ ದಲಾಲ್, ಈಶ್ವರ ಕರಬಸಣ್ಣವರ, ಶಂಕರಗೌಡ ಪಾಟೀಲ, ಅಜೀತ ಹೊನವಾಡ ಉಪಸ್ಥಿತರಿದ್ದರು.

ಕೃಷಿ ವಿಭಾಗದ ಮುಖ್ಯಸ್ಥ ನಿಂಗಪ್ಪ ಚೌಗಲಾ ಸ್ವಾಗತಿಸಿದರು. ಕಾಶೀನಾಥ ಜನಗೊಂಡ ನಿರೂಪಿಸಿದರು. ಪ್ರಶಾಂತ ಕುಲಕರ್ಣಿ ವಂದಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net