ಸರ್ಕಾರ ಕಾಯ್ದೆ ತಿದ್ದುಪಡಿ ಹಿಂಪಡೆಯಲಿ

JKD-12-1
Published on

ಜಮಖಂಡಿ: ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ತಾಲೂಕು ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂಜಯ ಇಂಗಳೆ ಅವರ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಕಾರ್ಯದರ್ಶಿ ರವಿ ಹುಣಶ್ಯಾಳ ಮಾತನಾಡಿ, ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ಕಾಯ್ದೆ ತಿದ್ದುಪಡಿ ಕಾರ್ಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕಾಧ್ಯಕ್ಷ ಚನಬಸಪ್ಪ ಕತಾಟೆ, ಶಂಕರೆಪ್ಪ ಜೀರಗಾಳ, ಯಾಕುಬ ನದಾಫ್, ಗುಡುಸಾಬ ಹೊನವಾಡ, ಕಾಡಯ್ಯ ಹಿರೇಮಠ, ಶಫೀ ಸಾರವಾನ, ನಿಸಾರ ಜೈನಾಪುರ, ಸುರೇಶ ಗುನ್ನಾಪುರ, ಅಸ್ಗರಅಲಿ ಝಂಡೆ, ಸುಭಾಸ ಲಗಳಿ, ಕಲ್ಮೇಶ ಗೋಕಾವಿ, ವಿಠ್ಠಲ ಮುಧೋಳ, ಸುರೇಶ ಎಣ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net