

ಜಮಖಂಡಿ: ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಮುಧೋಳ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಅಗ್ನಿ ಪ್ರವೇಶ ಕಾರ್ಯಕ್ರಮ ಸೋಮವಾರ ಸರಳವಾಗಿ ನೆರವೇರಿದವು.
ಬೆಳಗ್ಗೆ 4 ಗಂಟೆಗೆ ಮತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಿತು. 9 ಗಂಟೆಗೆ ಅಗ್ನಿಪುಟ ನೆರವೇರಿಸಿ 10 ಕ್ಕೂ ಹೆಚ್ಚು ಪುರವಂತ ವೇಷಧಾರಿಗಳು ಮತ್ತು ನೂರಾರು ಭಕ್ತರು ಅಗ್ನಿ ಪ್ರವೇಶ ಮಾಡಿ ಭಕ್ತಿ ಮೆರೆದರು. ವೀರಭದ್ರೇಶ್ವರ ಮೂರ್ತಿಗೆ ಭಕ್ತರು ಬುತ್ತಿಪೂಜೆ ನೇರವೆರಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಪುರವಂತರು ವೀರಗಾಸೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ರಾತ್ರಿ 8 ಗಂಟೆಗೆ ಕಾರ್ತಿಕೋತ್ಸವ, ಮಹಾಮಂಗಳಾರತಿ ನಡೆಯಿತು.
ಸಮಿತಿಯ ಹಿರಿಯ ಸದಸ್ಯರಾದ ಆರ್.ಎಸ್. ಅಕ್ಕಿ, ಎಂ.ಕೆ.ಹಿಟ್ಟಿನಮಠ, ಮಹಾದೇವ ಸಿಂಧೂರ, ಶ್ರೀಶೈಲ ತೆಲಸಂಗ, ಸಂಗಯ್ಯ ಮುಧೋಳಮಠ, ಡಾ.ಆನಂದ ಮಲಘಾಣ, ರಾಜು ಸಿಂಧೂರ, ಈರಣ್ಣ ಅಕ್ಕಿ, ವಿಶ್ವನಾಥ ಅಕ್ಕಿ, ರಾಜಶೇಖರ ಅಕ್ಕಿ, ಎಂ.ಐ. ಸೊಲ್ಲಾಪುರ, ಮಲ್ಲಿಕಾರ್ಜುನ ಹೋಳಗಿ, ಪ್ರಶಾಂತ ಚರಕಿ, ಈರಣ್ಣ ತೆಲಸಂಗ, ಮಹಾನಿಂಗ ವಂದಾಲ, ಶಿವಯ್ಯ ಕಲಕತ್ತಿಮಠ, ಅರ್ಚಕ ಈರಣ್ಣ ಕಾಡದೇವರಮಠ, ಸುನೀಲ ಕಾಡದೇವರಮಠ, ಸೋಮು ವಸದ, ಗಂಗಾಧರ ಸಿಂಧೂರ, ಶಿವಾನಂದ ಸಿಂಧೂರ, ದಾನಯ್ಯ ಮಠಪತಿ, ಪ್ರದೀಪ ಮೆಟಗುಡ್ಡ ಇತರರು ಇದ್ದರು.
EndFragment