ಓರ್ವ ವಿದ್ಯಾರ್ಥಿಗೆ 20 ಸಿಬ್ಬಂದಿ ಕಾರ್ಯ

JKD NEWS 13-1
Published on

ಜಮಖಂಡಿ: ನಗರದ ಬಿಎಲ್‌ಡಿಇ ಕಾಲೇಜಿನಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯು ಓರ್ವ ವಿದ್ಯಾರ್ಥಿ ಪರೀಕ್ಷೆಗಾಗಿ 20 ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ಪಿಯು ಶಿಕ್ಷಣ ವಿಷಯಕ್ಕೆ ಹಿಪ್ಪರಗಿ ಸರ್ಕಾರಿ ಪಿಯು ಕಾಲೇಜಿನ ಒರ್ವ ವಿದ್ಯಾರ್ಥಿ ಸಂತೋಷ ದಾಶ್ಯಾಳ ಮಾತ್ರ ಪರೀಕ್ಷೆಗೆ ಹಾಜರಾಗಿದ್ದನು. ಪರೀಕ್ಷಾ ಕೊಠಡಿ ಮೇಲ್ವಿಚಾರಕ ಎ.ಎಲ್.ಕಡಕೋಳ, ಪ್ರಾಚಾರ್ಯ ಎ.ಎಲ್. ನಾರಾಯಣಕರ, ಉಪನ್ಯಾಸಕ ಎಸ್.ಎಂ. ವಾಂಗಿ, ಮಹಾಂತೇಶ ಪುಟ್ಟಣ್ಣವರ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ 20 ಜನ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net