ಜಮಖಂಡಿ ಮಾದರಿ ನಗರವನ್ನಾಗಿ ಮಾಡಿ

JKD NEWS 2-1
Published on

ಜಮಖಂಡಿ: ನಗರವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಜೆಪಿ ಮುಖಂಡ, ಉದ್ಯಮಿ ಜಗದೀಶ ಗುಡಗುಂಟಿ ಹೇಳಿದರು.

ನಗರದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷ ಯಮನೂರ ಮೂಲಂಗಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರವನ್ನು ಮುಂದಿನ 5 ದಶಕಗಳಲ್ಲಿ ಪೂರ್ವ ನಿಯೋಜಿತವಾಗಿ ಅಭಿವೃದ್ಧಿ ಪಡಿಸಲು ಹೊಸ ಯೋಜನೆ ರೂಪಿಸಿ ಮಾದರಿ ನಗರವನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

ಪ್ರತಿಯೊಂದು ಯೋಜನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯೋಜನೆಗಳನ್ನು ರೂಪಿಸಿ ಸುಂದರ ನಗರವನ್ನಾಗಿ ಮಾಡಲು ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ನೂತನ ಅಧ್ಯಕ್ಷ ಯಮನೂರ ಮೂಲಂಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ನಿರ್ವಹಿಸಿ ಜಮಖಂಡಿ ನಗರವನ್ನು ಸ್ಮಾರ್ಟ್‌ಸಿಟಿ ಮಾಡುವ ಯೋಜನೆ ಹೊಂದಲಾಗಿದೆ ಎಂದರು.

ನಗರ ಮಂಡಳ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿದರು. ರಾಜ್ಯ ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ಉಕುಮನಾಳ, ಜಿಲ್ಲಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ, ನಗರಸಭೆ ಸದಸ್ಯ ಗುರುಪಾದ ಮೆಂಡಿಗೇರಿ, ಪ್ರಾಧಿಕಾರ ನೂತನ ಸದಸ್ಯರಾದ ರಾಹುಲ್ ದೇಸಾಯಿ, ಶ್ರೀಧರ ಕಂಬಿ, ಮುರುಗೇಶ ಕಲ್ಯಾಣಶೆಟ್ಟಿ, ಯುವ ಮುಖಂಡ ಸಮೀರ ಕುಲಕರ್ಣಿ ಇತರರು ಇದ್ದರು. ಗಣೇಶ ಶಿರಗಣ್ಣವರ ಸ್ವಾಗತಿಸಿದರು. ಕುಶಾಲ ವಾಗ್ಮೋರೆ ನಿರೂಪಿಸಿದರು. ಪ್ರದೀಪ ಸಿಂಗಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net