ನರೇಗಾದಲ್ಲಿ ಮಾದರಿ ಅಂಗನವಾಡಿ ನಿರ್ಮಾಣ

jamabandi meeting
eo meeting
Published on

ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
ನರೇಗಾದಡಿ ಗ್ರಾಪಂಮಟ್ಟದಲ್ಲಿ 4 ಅಂಗನವಾಡಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ಮಾದರಿ ಕೇಂದ್ರಗಳನ್ನಾಗಿ ಮಾಡಬಹುದಾಗಿದೆ ಎಂದು ತಾಪಂ ಇಒ ಶ್ರೀನಾಥ್‌ಗೌಡ ಹೇಳಿದರು.
ಹೋಬಳಿಯ ನಲ್ಲೂರು ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಜಮಾಬಂದಿ ಸಭೆಯಲ್ಲಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಭಿನ್ನ ರೀತಿಯಲ್ಲಿ ಕಾಮಗಾರಿ ಮಾಡಬಹುದು. ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಪಾರ್ಕ್ ನಿರ್ಮಾಣಕ್ಕೂ ಅವಕಾಶವಿದೆ ಎಂದರು.
ಸರ್ವೇ ನಂಬರ್‌ಗಳ ಲೇಔಟ್‌ಗಳಲ್ಲಿ ಮನೆ ನಿರ್ಮಿಸಿಕೊಂಡರೂ ಕಂದಾಯ ವಸೂಲಾತಿ ಮಾಡಬೇಕು. ಗ್ರಾಪಂ ಜಲಗಾರರು ಕರ ವಸೂಲಿಗಾರರೊಂದಿಗೆ ಸೇರಿ ಕಂದಾಯ ವಸೂಲಿಗೆ ಮುಂದಾದರೆ ಅಭಿವೃದ್ಧಿಗೆ ಆದ್ಯತೆ ನೀಡಬಹುದು ಎಂದರು.
ಕೊಳಾಯಿಗಳ ಬಳಿ ಶುಚಿಯಾಗಿಡುವುದು, ಬ್ಲೀಚಿಂಗ್ ಪೌಡರ್ ಸಿಂಪಡಿಸುವುದು, ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಗಂಗಾಧರ್ ಮೂರ್ತಿ ಮಾತನಾಡಿ, ಈಗಾಗಲೇ ಎಲ್ಲ ಶಾಲೆಗಳಲ್ಲಿಗೂ ಭೇಟಿ ನೀಡಿ ಶಾಲೆಗಳ ಮೂಲ ಸೌಕರ್ಯ ಹಾಗೂ ಮಧ್ಯಾಹ್ನದ ಬಿಸಿ ಊಟ ಸರಿಯಾಗಿ ನೀಡುತ್ತಿರುವ ಬಗ್ಗೆ ಪರಿಶೀಲಿಸಿದ್ದೇವೆ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಮುನಿರಾಜು, ಕಮಲಾ ನಂಜೇಗೌಡ, ರಾಮನಹಳ್ಳಿ ನರಸಿಂಹಮೂರ್ತಿ, ಶ್ಯಾಮಲಾದೇವಿ, ನಾಗಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net