ಸಂಭ್ರಮದ ಜಗದ್ಗುರು ಸಿದ್ಧಾರೂಢರ ಜಲರಥೋತ್ಸವ

Jalrathotsava of Jagadguru Siddharudhar
ಮಹಾಲಿಂಗಪುರದಲ್ಲಿ ಸಿದ್ಧಾರೂಢರ 95ನೇ ಪುಣ್ಯಾರಾಧನೆ ನಿಮಿತ್ತ 42ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ) ನಡೆಯಿತು.
Published on

ಮಹಾಲಿಂಗಪುರ: ಶಿವನ ಅವತಾರವೆಂದೇ ಹಿಂದುಗಳು ನಂಬಿರುವ ಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸದ್ಗುರು ಸಿದ್ಧಾರೂಢರ 95ನೇ ಪುಣ್ಯಾರಾಧನೆ ನಿಮಿತ್ತ 42ನೇ ವರ್ಷದ ಜಲರಥೋತ್ಸವ(ತೆಪ್ಪ್ಪೋತ್ಸವ) ಮಂಗಳವಾರ ಸಂಜೆ ವಿಶಾಲ ಕೆರೆಯಲ್ಲಿ ಸಂಭ್ರಮದಿಂದ ನಡೆಯಿತು.

ಅಲಂಕೃತ ರಥದಲ್ಲಿನ ಸಿದ್ಧಾರೂಢರ ಮೂರ್ತಿಗೆ ಸೈದಾಪುರದ ಚೇತನ-ಪೂರ್ಣಿಮಾ ಹಾದಿಮನಿ ದಂಪತಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅಲ್ಲಿದ್ದ ಅಪಾರ ಭಕ್ತರು ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ದಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷ ಮೊಳಗಿಸಿದರು.

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕರ್ನಾಟಕದಲ್ಲಿ ನಡೆಯುವ ಎರಡನೇ ದೊಡ್ಡ ತೆಪ್ಪೋತ್ಸವ ಇದಾಗಿದೆ. ತೆಪ್ಪೋತ್ಸವ ವೀಕ್ಷಣೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತರು ಆಗಮಿಸಿ ರಥೋತ್ಸವಕ್ಕೆ ನಿಂಬೆಹಣ್ಣು, ಹೂ, ಬೆಂಡ, ಬೆತ್ತಾಸುಗಳು ಹಾರಿಸಿ ಭಕ್ತಿ ಸಮರ್ಪಿಸಿದರು.

ಉತ್ಸವಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ, 10 ಗಂಟೆಗೆ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ಹಿಪ್ಪರಗಿ, ಖಾನಟ್ಟಿ, ಬುದ್ನಿ ಪಿಡಿ ಭಜನಾ ಮೇಳದಿಂದ ಭಜನಾ ಕಾರ್ಯಕ್ರಮಗಳು ನಡೆದವು. ದಾವಣಗೇರೆಯ ಸ್ಫೂರ್ತಿ ಮಹಿಳಾ ನಗರ ಗ್ರಾಮೀಣಾಭಿವೃದ್ಧಿ ಸ್ವಯಂ ಉದ್ಯೋಗ ತರಬೇತಿ ಶಿಬಿರದ 200ಕ್ಕೂ ಅಧಿಕ ಮಹಿಳೆಯರು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಮಹಿಳೆಯರಿಗೆ ಉಡಿ ತುಂಬಿದರು.ಪ್ರಸಾದ ವಿತರಣೆ ಸೇವೆ ಸಲ್ಲಿಸಿದರು.

ಸಹಜಯೋಗಿ ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಘಟಪ್ರಭಾದ ಭೀಮಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ರನ್ನಬೆಳಗಲಿ ಸದಾಶಿವ ಗುರೂಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ಗದಗದ ಮುಕ್ತಾತಾಯಿ, ಹರಳಕಟ್ಟಿಯ ದಯಾನಂದ ಸ್ವಾಮೀಜಿ, ಕಂಕನವಾಡಿ ಮಾರುತಿ ಶರಣರು, ನಾಗರಾಳದ ಅನಂತಾನಂದ ಶರಣರು, ಉತ್ತರಾಧಿಕಾರಿ ಸಿದ್ದಾನಂದ ಭಾರತಿ ಸ್ವಾಮೀಜಿ, ಕೋಲೂರಿನ ಮಲ್ಲಪ್ಪ ಪೂಜಾರಿ ಶರಣರು, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಭಾಗವಹಿಸಿದ್ದರು.

ಸಿದ್ಧಾರೂಢ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಡಾ.ಬಿ.ಡಿ. ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಸಹಕಾರ್ಯದರ್ಶಿ ಗುರುಪಾದ ಅಂಬಿ, ಧರ್ಮದರ್ಶಿಗಳಾದ ಮಲ್ಲಪ್ಪ ಕಟಗಿ, ಗೋಲೇಶ ಅಮ್ಮಣಗಿ, ಸದ್ಭಕ್ತರಾದ ಮಹಾಂತೇಶ ಘಟ್ನಟ್ಟಿ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಎಸ್.ಕೆ. ಗಿಂಡೆ, ಮಹಾಲಿಂಗ ಕರೆಹೊನ್ನ, ಚನ್ನಪ್ಪ ಚಂಡೋಲ, ಚನ್ನಪ್ಪ ಗೂಗಾಡ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಲಿಂಗ ತೇಲಿ, ಕಲ್ಮೇಶ ಕುಂಬಾರ, ಹನುಮಂತ ಹೂಗಾರ, ಮಲ್ಲಪ್ಪ ಯಾದವಾಡ, ಹಣಮಂತ ಮೀರಾಪಟ್ಟಿ, ಕುಮಾರ ಉಳ್ಳಾಗಡ್ಡಿ, ಸಿದ್ರಾಮಯ್ಯ ಗೋಠೆ, ಸುರೇಶ ಕೆಂಪವಾಡ, ಶಂಕರಗೌಡ ಪಾಟೀಲ, ಎಂ. ಗುಡ್ಡಪ್ಪ, ಕಲ್ಲಪ್ಪ ಚಿಂಚಲಿ, ಉದ್ದಪ್ಪ ನಿಲಾರಿ, ಸಿದ್ದು ಧಡೂತಿ, ಮಹಾಲಿಂಗ ಉಪ್ಪಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net