

ಜಗಳೂರು: ಸಿರಿಗೆರೆ ಶ್ರೀಗಳ ಆಶಯದಂತೆ ಹಿಂದುಳಿದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಲೋಪವುಂಟಾಗಿದ್ದು, ಆಯಾ ಭಾಗದ ಜನರ ನಿರ್ಲಕ್ಷೃವೇ ಕಾರಣವೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ ಆರೋಪಿಸಿದರು.
ತಾಲೂಕಿನ ಬಿಳಿಚೋಡು ಸಮೀಪ ಕೆರೆ ತುಂಬಿಸುವ ಯೋಜನೆ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಗ್ರಾಮಗಳ ಮೂಲಕ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳಪೆಯಾಗಿ ಪೈಪ್‌ಗಳು ಮುಚ್ಚುತ್ತಿದ್ದರೂ ಆಯಾ ವ್ಯಾಪ್ತಿಯ ಯುವಕರು, ವಿದ್ಯಾವಂತರು, ರೈತ ಮುಖಂಡರು ಧ್ವನಿ ಎತ್ತಿಲ್ಲ. ಇದರಿಂದ ಕಾಮಗಾರಿಯಲ್ಲಿ ಲೋಪವೆಸಗಲಾಗಿದೆ. ಆದ್ದರಿಂದ ಈಗಲಾದರೂ ಆಯಾಭಾಗದ ಜನರು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿಗೆ ಆಗ್ರಹಿಸುವಂತೆ ಮನವಿ ಮಾಡಿದರು.
ರೈತ ಮುಖಂಡರಾದ ಕೆಚ್ಚೇನಹಳ್ಳಿ ಸಂಪತ್ತುಕುಮಾರ್, ಬಿಳಿಚೋಡು ರಂಗಸ್ವಾಮಿ, ಮರಿಕುಂಟೆ ಮಹೇಶ್, ಗೋವಿಂದಪ್ಪ, ಮೆದಕೆರೆನಹಳ್ಳಿ ವೀರಣ್ಣ, ಚಂದ್ರಪ್ಪ ಮತ್ತಿತರಿದ್ದರು.