

ಕೆ.ಆರ್.ಸಾಗರ: ಮೊಗರಹಳ್ಳಿ ಗ್ರಾಮದಲ್ಲಿ ಜಲಜೀವನ್ ಮೀಷನ್ ಯೋಜನೆಯಡಿ ಪೈಪ್‌ಲೈನ್ ಹಾಗೂ ಅಣಗನಹಳ್ಳಿಯಲ್ಲಿನ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ಮಾಡಿದರು.
ನೀರು ಅಮೂಲ್ಯ ವಸ್ತುವಾಗಿದ್ದು, ಇದು ಪ್ರತಿಯೊಬ್ಬರಿಗೂ ದೊರೆಯಬೇಕು. ಹೀಗಾಗಿ ಎಲ್ಲರೂ ಮೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಪೋಲಾಗದಂತೆ ನೋಡಿಕೊಳ್ಳಬೇಕು. ಎಲ್ಲರಿಗೂ ಸಮರ್ಪಕವಾಗಿ ನೀರು ಸಿಗಲಿ ಎನ್ನುವುದೇ ಈ ಯೋಜನೆಯಾಗಿದೆ ಎಂದು ಶಾಸಕರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ, ಪಿಡಿಒ ಎಸ್.ಡಿ.ಶಶಿಕಲಾ, ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಚೆಲುವರಾಜು, ಸದಸ್ಯರಾದ ವಿಶ್ವನಾಥ್, ಮುರಳಿ, ಕೋಮಲಾ, ಶ್ರೀನಿವಾಸ್, ಅಂಬಿಕಾ, ಯೋಗೇಶ್, ಕೃಷ್ಣಾನಂದ, ಎಲಿಜಬೆತ್ ರಾಣಿ, ಗೀತಾ ಶ್ರೀಕಂಠು, ಬಾಲನಾಗು ಇತರರು ಇದ್ದರು.