

ಬೆಂಗಳೂರು: ನೀರು ಬಳಕೆ, ಶೇಖರಣೆ ಹಾಗೂ ಪೂರೈಕೆಯಲ್ಲಿ ದಕ್ಷತೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಲ ಸಂಪತ್ತಿನ ಸಮಗ್ರ, ಸಮರ್ಥ ನಿರ್ವಹಣೆಗೆ ಉದ್ದೇಶಿತ ರಾಜ್ಯ ಜಲ ನೀತಿ-2021ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಅನುಮೋದನೆ ದೊರೆತಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಈ ವಿಷಯ ತಿಳಿಸಿ, ನೀರಿನ ವ್ಯರ್ಥ ಪೋಲು ತಡೆದು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ನೀತಿಯ ಪ್ರಧಾನ ಗುರಿಯಾಗಿದೆ. ಜಲ ಸಂಪನ್ಮೂಲ ಸಮರ್ಪಕ ನಿರ್ವಹಣೆ, ಬಲವರ್ಧನೆಗಾಗಿ ರಾಜ್ಯ ಜಲ ಸಂಪನ್ಮೂಲ ಪ್ರಾಧಿಕಾರ ರಚಿಸಲಾಗುವುದು. ನೀರು ಬಳಕೆದಾರರ ಸಂಗಳನ್ನು ಸಕ್ರಿಯಗೊಳಿಸುವುದು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಮಟ್ಟದ ಜಲ ನೀತಿ ಸಮಿತಿ ರಚನೆ ತೀರ್ಮಾನಿಸಲಾಗಿದೆ. ಪ್ರವಾಹದ ನೀರು ತಿರುಗಿಸಿ, ಹಿಡಿದಿಟ್ಟು ಬಳಸಿಕೊಳ್ಳುವುದಕ್ಕೆ ನೀತಿಯು ಆದ್ಯತೆ ನೀಡಿದೆ. ಒಟ್ಟಾರೆ ಜಲ ಸಂಪನ್ಮೂಲ ನಿರ್ವಹಣೆಯ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವುದು ನೀತಿಯ ಆಶಯವಾಗಿದೆ ಎಂದು ಹೇಳಿದ್ದಾರೆ.
ಇತರ ಬೇಡಿಕೆ ಏರಿಕೆ
ಪ್ರಾದೇಶಿಕ್ಷಕವಾಗಿ ನೀರಿನ ಲಭ್ಯತೆ ಮತ್ತು ಬೇಡಿಕೆಗಳು ಬದಲಾಗುತ್ತಿದ್ದರೂ ಸರಾಸರಿ ಮಳೆ ವರ್ಷದಲ್ಲಿನ ವಿವಿಧ ಬಳಕೆಗಳಿಗೆ ಉಪಯೋಗಿಸಬಹುದಾದ ಮೇಲ್ಮೆ ನೀರಿನ ಬಳಕೆ 1690 ಟಿಎಂಸಿ ಅಡಿಗೆ ಸೀಮಿತವಾದರೆ, ಅಂತರ್ಜಲ ಬಳಕೆ 378 ಟಿಎಂಸಿ ಅಡಿಗೆ ಸೀಮಿತವಾಗಿದೆ. 2025ರ ವೇಳೆಗೆ ಕೃಷಿಗಿಂತ ಕೃಷಿಯೇತರ ಬೇಡಿಕೆ ಮೂರು ಪಟ್ಟು ಹೆಚ್ಚಲಿದೆ ಎಂಬ ಅಂದಾಜಿದ್ದು, ನೀರಿನ ಉತ್ಪಾದಕತೆ ಸುಧಾರಣೆ, ನೀರಿನ ಗುಣಮಟ್ಟ ಮತ್ತು ಮರುಬಳಕೆಗೆ ಹೆಚ್ಚು ಗಮನ, ಜಲ ಮೂಲಗಳ ಸಂರಕ್ಷಣೆ, ನೀರು ನಿರ್ವಹಣೆಯಲ್ಲಿ ರೈತರು ಹಾಗೂ ಬಳಕೆದಾರರ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸುವುದು ಜಲ ನೀತಿ ಭಾಗವಾಗಿದೆ ಎಂದು ಸಚಿವರು ವಿವರಿಸಿದರು.
'
ಮುಖ್ಯಾಂಶಗಳು
*ಪ್ರತಿ ವ್ಯಕ್ತಿಗೆ ವಾರ್ಷಿಕ 1,608 ನ ಮೀಟರ್ ಬಳಕೆ
*ಒಟ್ಟಾರೆ ಬಳಸುತ್ತಿರುವ ನೀರಿನಲ್ಲಿ ಶೇ.26ರಷ್ಟು ಅಂತರ್ಜಲ
*ಕೃಷಿಗೆ ನೀರಿನ ಬೇಡಿಕೆ 2025ರವೇಳೆಗೆ 1,850 ಟಿಎಂಡಿ ಅಡಿಗೆ ತಲುಪುವ ನಿರೀೆ
*ನೀರಾವರಿ ವ್ಯವಸ್ಥೆಗಳಲ್ಲಿ ಕಾಲುವೆ ಯಾಂತ್ರೀಕರಣದ ಬಳಸುವಿಕೆ ಕಡ್ಡಾಯ
*ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ಅಂತರ್ಜಲ ಬಳಕೆಗೆ ಮೀಟರಿಂಗ್ ಆಧರಿಸಿ ದರ ನಿಗದಿ ಪರಿಗಣನೆ
*ಗ್ರಾಮೀಣ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಪಂಚಾಯಿತಿ ಮಟ್ಟದಲ್ಲಿ ಅಂತರ್ಜಲ ಬಜೆಟ್, ಸಮಗ್ರ ಅಂತರ್ಜಲ-ಕೆರೆ- ಜಲಾನಯನ ನಿರ್ವಹಣೆ ಸಹಭಾಗಿತ್ವ ಅಳವಡಿಕೆ
*ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಹೊರಗಿನ, ಸ್ಥಳಿಯ ನೀರು, ಮೇಲ್ಮೆ, ಅಂತರ್ಜಲ, ಛಾವಣಿ ಮತ್ತು ತ್ಯಾಜ್ಯ ನೀರಿನ ನಿರ್ವಹಣೆಗೆ ಒತ್ತು