ಜಾಲಹಳ್ಳಿ ಗ್ರಾಪಂ ಮೇಲ್ದರ್ಜೆ ಬೇಡ

081020 Devadurga Jalahalli Villagers Protest
ಜಾಲಹಳ್ಳಿ ಗ್ರಾಪಂಅನ್ನು ಮೇಲ್ದರ್ಜೆಗೇರಿಸಬಾರದು ಎಂದು ಒತ್ತಾಯಿಸಿ ದೇವದುರ್ಗದ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಕೂಲಿಕಾರರು ಹಾಗೂ ನಿರುದ್ಯೋಗಿ ಯುವಕರು ಗುರುವಾರ ಮನವಿ ಸಲ್ಲಿಸಿದರು.
Published on

ದೇವದುರ್ಗ: ಜಾಲಹಳ್ಳಿ ಗ್ರಾಮಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಬಾರದು. ಬದಲಿಗೆ ಗ್ರಾಪಂ ಆಗಿ ಮುಂದುವರಿಸಲು ಒತ್ತಾಯಿಸಿ ಮಿನಿವಿಧಾನಸೌಧದ ಎದುರು ಕೂಲಿಕಾರ್ಮಿಕರು ಹಾಗೂ ನಿರುದ್ಯೋಗಿ ಯುವಕರು ಗುರುವಾರ ಪ್ರತಿಭಟನೆ ನಡೆಸಿದರು.

ಜಾಲಹಳ್ಳಿ ಗ್ರಾಮ ಕಡಿಮೆ ವ್ಯವಸಾಯ ಭೂಮಿ ಹೊಂದಿದೆ. ಶೇ.80 ರಷ್ಟು ಜನ ಕೂಲಿ ಅವಲಂಬಿಸಿದ್ದಾರೆ. ಇಲ್ಲಿನ ಕೂಲಿಕಾರರು ಗಬ್ಬೂರು, ಮಸರಕಲ್, ಕೊಪ್ಪರ, ಹತ್ತಿಗೂಡೂರು ಮತ್ತಿತರೆಡೆ ದುಡಿಯಲು ತೆರಳುತ್ತಿದ್ದಾರೆ. ಕೃಷಿ ಚಟುವಟಿಕೆ ನಡೆಯದ ಸಂದರ್ಭ ಅನೇಕರು ಗುಳೆ ಹೋಗುತ್ತಾರೆ. 1000ಕ್ಕೂ ಹೆಚ್ಚು ಕೂಲಿಕಾರರು ಹಾಗೂ 1000ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಉದ್ಯೋಗ ಖಾತ್ರಿ ನಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಪಂ ಮೇಲ್ದರ್ಜೆಗೆ ಏರಿದರೆ ನರೇಗಾ ಮತ್ತಿತರ ಯೋಜನೆಗಳು ಕೈತಪ್ಪಲಿವೆ. ತೆರಿಗೆ ಹೆಚ್ಚಾಗುತ್ತದೆ. ಇದರಿಂದ ಜನಕ್ಕೆ ತೊಂದರೆಯಾಗಲಿದೆ ಎಂದು ವಿವರಿಸಿದರು. ಮನವಿ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೋರಾಟ ವೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net