6.45ಕೋಟಿ ರೂ. ಕ್ರಿಯಾ ಯೋಜನೆಗೆ ಒಪ್ಪಿಗೆ

Untitled design 1
Published on

ದೇವದುರ್ಗ: 15ನೇ ಹಣಕಾಸು ಯೋಜನೆಯ ಅನುದಾನ ನಿರ್ದಿಷ್ಟ ಉದ್ದೇಶಕ್ಕೆ ಬಳಕೆ, ನರೇಗಾ ಯೋಜನೆಯಡಿ 6.45ಕೋಟಿ ರೂ. ಕ್ರಿಯಾ ಯೋಜನೆಗೆ ತಾಲೂಕಿನ ಜಾಲಹಳ್ಳಿ ಗ್ರಾಪಂಯಲ್ಲಿ ಅಧ್ಯಕ್ಷ ವಿಜಯಲಕ್ಷ್ಮೀ ತೋಟದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ಶುಕ್ರವಾರ ಕೈಗೊಳ್ಳಲಾಯಿತು.

ಪಿಡಿಒ ನರಸಪ್ಪ ಆಶಾಪುರ ಮಾತನಾಡಿ, 2025-26ನೇ ಸಾಲಿನ ನರೇಗಾ ಯೋಜನೆಯಡಿ 6.48ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅದರಲ್ಲಿ ಸುಮಾರು 3 ಕೋಟಿ ಹಣವನ್ನು ಕೂಲಿಕಾರ್ಮಿಕ ಕೂಲಿಗಾಗಿ ಬಳಕೆ, 2.67 ಕೋಟಿ ರೂ. ವೈಯಕ್ತಿಕ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲು ಅನುದಾನ ಮೀಸಲಿಡಲಾಗಿದೆ. ವೈಯಕ್ತಿಕ ಕಾಮಗಾರಿಯಲ್ಲಿ 1.80ಕೋಟಿ ಅನುದಾನವನ್ನು ಶಾಲಾ ಕಾಂಪೌಂಡ್, ಶೌಚಗೃಹ, ಆಟದ ಮೈದಾನ ಸಮತಟ್ಟು ಮತ್ತು ಸರ್ಕಾರಿ ಕಟ್ಟಡಗಳ ರಕ್ಷಣಾಗೋಡೆಗೆ ನಿರ್ಮಿಸಿಕೊಳ್ಳಲು ಆದ್ಯತೆ ನೀಡಲಾಗಿದೆ. 4 ತಿಂಗಳಲ್ಲಿ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. 15ನೇ ಹಣಕಾಸು ಯೋಜನೆ 70 ಲಕ್ಷ ರೂ.ಅನುದಾನ ಮಂಜೂರಾಗಿದ್ದು, 9 ವಾರ್ಡ್‌ಗಲ್ಲಿ ಮೂಲಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು. ಸದಸ್ಯ ಅಬ್ದುಲ್ ರಹಿಮಾನ ಮಾತನಾಡಿದರು.

ಉಪಾಧ್ಯಕ್ಷ ಈರಪ್ಪ ನಾಯಕ, ಕಾರ್ಯದರ್ಶಿ ಗುಂಡಪ್ಪ, ಕರವಸೂಲಿಗಾರ ವೆಂಕೋಬ, ಮುದ್ದರಂಗಪ್ಪ ನಾಯಕ, ಸದಸ್ಯರಾದ ತಿಮ್ಮಣ್ಣ ನಾಯಕ ದಿವಾನ್, ಮಕ್ತೂಮ್ ಬಾಷಾಪಾರಶಿ, ಬಸವರಾಜ ಗೋಪಾಳಪುರ, ಸೊಲಬಣ್ಣ ಹಂಪರಗುಂದಿ, ಅಯ್ಯಪ್ಪಸ್ವಾಮಿ, ರಂಗನಾಥ ನಾಯಕ ಕುದರಿ, ರಜೀಯಾ ಬೇಗಂ, ಶೈನಾಜ್ ಬೇಗಂ, ಹುಲಿಗೆಮ್ಮ, ಮಲ್ಲಣ್ಣ ಸೌದ್ರಿ, ಶಿವಪ್ಪ ನಾಯಕ ಗಾಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net