ಜಾಲಹಳ್ಳಿಯಲ್ಲಿ ಚರಂಡಿ ಹೂಳು ತೆರವು ಮಾಡಿ

1-DVD-4
ದೇವದುರ್ಗ ತಾಲೂಕು ಜಾಲಹಳ್ಳಿ ಗ್ರಾಪಂ ಪಿಡಿಒ ನರಸಪ್ಪಗೆ 8, 9ನೇ ವಾರ್ಡ್ ನಿವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಸಂಜೀವ್‌ರೆಡ್ಡಿ ಸಾಹುಕಾರ, ಚನ್ನಬಸವ ಸೌದ್ರಿ, ಶಶಿಕಲಾ ಚನ್ನಬಸವ, ಡಾ.ವಿಜಯರೆಡ್ಡಿ, ಗಂಗಾಧರ್, ಮೌನೇಶ ದೇಸಾಯಿ ಇದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿಯ 8 ಮತ್ತು 9ನೇ ವಾರ್ಡ್‌ನ ರಾಜ ಕಾಲುವೆಯಲ್ಲಿ ಹೂಳು ತುಂಬಿದ್ದು ತೆರವು ಮಾಡಬೇಕೆಂದು ಆಗ್ರಹಿಸಿ ಗ್ರಾಪಂ ಪಿಡಿಒ ನರಸಣ್ಣಗೆ ನಿವಾಸಿಗಳು ಮಂಗಳವಾರ ಮನವಿ ಸಲ್ಲಿಸಿದರು.

ಸ್ಥಳೀಯ ನಿವಾಸಿ ಸಂಜೀವ್ ರೆಡ್ಡಿ ಸಾಹುಕಾರ ಮಾತನಾಡಿ, ಎಂಟು ಮತ್ತು 9ನೇ ವಾರ್ಡ್‌ನಲ್ಲಿ ನಿರ್ಮಿಸಿದ ರಾಜ ಕಾಲುವೆ ಸಂಪೂರ್ಣ ಹೂಳಿನಿಂದ ತುಂಬಿದೆ. ಇದರಿಂದ ಚರಂಡಿ ನೀರು ಮುಂದಕ್ಕೆ ಹರಿಯುತ್ತಿಲ್ಲ.

ತಿಂಥಣಿ ಬ್ರಿಡ್ಜ್-ಕಲ್ಮಲಾ ರಾಜ್ಯ ಹೆದ್ದಾರಿ ಮೇಲೆ ಚರಂಡಿ ನೀರು ಹರಿಯುತ್ತಿದೆೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಆವರಿಸುತ್ತಿವೆ. ಪಕ್ಕದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳಿದ್ದು ವಿದ್ಯಾರ್ಥಿಗಳು ಓಡಾಡಲು ಸಮಸ್ಯೆಯಾಗಿದೆ.

ಈ ಬಗ್ಗೆ ಗ್ರಾಪಂಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ರಾಜ ಕಾಲುವೆಯಲ್ಲಿ ತುಂಬಿರುವ ಹೂಳು ತೆರವು ಮಾಡಬೇಕು. ಕಸ ಸಮರ್ಪಕ ವಿಲೇವಾರಿ ಮಾಡಿ ಚರಂಡಿ ನೀರು ಮುಂದಕ್ಕೆ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ವಾರ್ಡ್‌ನಲ್ಲಿ ಫಾಗಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.

ನಿವಾಸಿಗಳಾದ ಸಂಜೀವ್ ರೆಡ್ಡಿ ಸಾಹುಕಾರ, ಚನ್ನಬಸವ ಸೌದ್ರಿ, ಶಶಿಕಲಾ ಚನ್ನಬಸವ, ಡಾ.ವಿಜಯರೆಡ್ಡಿ, ಗಂಗಾಧರ್, ಮೌನೇಶ ದೇಸಾಯಿ, ನರೇಶ ದೇಸಾಯಿ, ಅಯ್ಯಣ್ಣ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net