ಬೆಂಕಿ ಆಕಸ್ಮಿಕದಲ್ಲಿ ಮೆಕ್ಕೆಜೋಳ, ರಾಗಿ ಬಣವೆಗಳಿಗೆ ಹಾನಿ

JAGALURU FIRE ACCIDENT
Published on

ಜಗಳೂರು: ತಾಲೂಕಿನ ಐನಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೆಕ್ಕೆಜೋಳ ತೆನೆ, ರಾಗಿ, ಜೋಳದ ಬಣವೆಗಳು ಸಂಪೂರ್ಣ ಸುಟ್ಟಿವೆ.

ಗಾದ್ರಿ ಪಾಲಯ್ಯಗೆ ಸೇರಿದ 10 ಲೋಡ್ ಮೆಕ್ಕೆಜೋಳದ ತೆನೆ, 2 ಲೋಡ್ ರಾಗಿ ಹುಲ್ಲು, ಗುಂಡಮ್ಮ ಅವರಿಗೆ ಸೇರಿದ 7 ಲೋಡ್ ಮೆಕ್ಕೆಜೋಳ, ಕೊಟ್ರೇಶ್ ಅವರ 2 ಲೋಡ್ ರಾಗಿ ಹುಲ್ಲಿನ ಬಣವೆ, ಅಜ್ಜಪ್ಪ ಅವರ 3 ಲೋಡ್ ಮೆಕ್ಕೆಜೋಳ ತೆನೆಗೆ ಹಾನಿಯಾಗಿದೆ.

ಕಣದಲ್ಲಿ ಸಂಗ್ರಹಿಸಿದ್ದ ಬಣವೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ಇನ್ನಿತರ ಬಣವೆಗಳಿಗೂ ವ್ಯಾಪಿಸಿತು. ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಹೆಚ್ಚಿನ ಹಾನಿ ತಪ್ಪಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net