ಜಲಗಾ ಗ್ರಾಮದಲ್ಲಿ ಮತ್ತೆ ಆನೆ ಪ್ರತ್ಯಕ್ಷ

18KHANAPUR2
Published on

ಖಾನಾಪುರ: ತಾಲೂಕಿನ ಜಲಗಾ ಪ್ರದೇಶದಲ್ಲಿ ಬುಧವಾರ ಮತ್ತೊಮ್ಮೆ ಆನೆ ಕಾಣಿಸಿಕೊಂಡಿದೆ. ಎರಡ್ಮೂರು ತಿಂಗಳಿನಿಂದ ಖಾನಾಪುರ ತಾಲೂಕು ಕೇಂದ್ರ ಭಾಗದಲ್ಲಿ ಆನೆ ಸ್ವಚ್ಛಂದವಾಗಿ ಸಂಚರಿಸುತ್ತಿದೆ.

ಜನವಸತಿ ಪ್ರದೇಶಗಳಲ್ಲಿ ಆನೆ ಸಂಚಾರ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ. 2 ತಿಂಗಳ ಹಿಂದೆ ಚಾಪಗಾಂವ್ ಪ್ರದೇಶದಲ್ಲಿದ್ದ ಆನೆ ನಂತರ ಕೊಡಚವಾಡದ ರುದ್ರಸ್ವಾಮಿ ಮಠದಿಂದ ಜಲಗಾ ಮೂಲಕ ಅರಣ್ಯಕ್ಕೆ ವಾಪಸ್ ತೆರಳಿತ್ತು. ಕಳೆದ ಎಂಟು-ಹತ್ತು ದಿನಗಳಿಂದ ಆನೆ ನದಿ ದಡದ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡಿತ್ತು.

ಬುಧವಾರ ಮಧ್ಯಾಹ್ನ ಜಲಗಾ ಗ್ರಾಮದಲ್ಲಿ ಆನೆ ಮತ್ತೆ ಸುತ್ತುತ್ತಿರುವುದು ಕಂಡು ಬಂದಿದೆ. ಆದರೆ, ಆನೆಯಿಂದ ಭತ್ತದ ಗದ್ದೆಗಳಿಗೆ ಸಾಕಷ್ಟು ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net