

ಸವಣೂರ: ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಶುಕ್ರವಾರ ಶ್ರೀ ರೇವಣಸಿದ್ಧೇಶ್ವರ ದೇವರ ಜಲ ರಥೋತ್ಸವ ಸಂಭ್ರಮದಿಂದ ಜರುಗಿತು.
ಮಂತ್ರೋಡಿ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ನಿರಂತರ ಒಂದು ತಿಂಗಳ ಕಾಲ ಶ್ರಾವಣ ಮಾಸದ ಕಾರ್ಯಕ್ರಮ ಕೈಗೊಳ್ಳಲಾಯಿತು.
ನಿತ್ಯ ರೇವಣಸಿದ್ಧೇಶ್ವರ ಗದ್ದುಗೆಗೆ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಗದ್ದುಗೆಗೆ ಶ್ರೀಮಠದ ಪೂಜ್ಯರ ಸಾನ್ನಿಧ್ಯದಲ್ಲಿ ವೇಮೂ ವಿರೂಪಾಕ್ಷಯ್ಯ ಹಿರೇಮಠಶಾಸ್ತ್ರಿ ಅವರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ಬೆನಕನ ಅಮಾವಾಸ್ಯೆ ಅಂಗವಾಗಿ ರೇವಣಸಿದ್ಧೇಶ್ವರ ಬೆಟ್ಟದಿಂದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳ ಮೆರವಣಿಗೆಯು ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಸಂಜೆ ಗ್ರಾಮದ ಕೆಂಪಿಕೆರೆಯಲ್ಲಿ ಜಲ ರಥೋತ್ಸವ ಜರುಗಿತು.