

ಹುಬ್ಬಳ್ಳಿ: ಭೂಮಿಗೆ ಬಂದ ಬಳಿಕ ಹೆತ್ತವರು, ಕಲಿಸಿದ ಗುರು ಹಾಗೂ ಸಮಾಜದ ಋಣವನ್ನು ತೀರಿಸಬೇಕೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ಹೇಳಿದರು.
ಇಲ್ಲಿಯ ಎಪಿಎಂಸಿ ಆವರಣದ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜೀವಿ ಕಲಾ ಬಳಗ ಹಾಗೂ ಜಕ್ಕನಗೌಡರ ಬಂಧುಗಳು ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಸಂಗಮೇಶ ಜಕ್ಕನಗೌಡ್ರ ಹಾಗೂ ದಂಪತಿಯ ಮದುವೆ ವಾಷಿರ್ಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಜಕ್ಕನಗೌಡರು ಒಳ್ಳೆಯ ಯೋಗ ಪಟುಗಳು, ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆಗೆ ಸೇರಿ ಇಂದು ಹುಬ್ಬಳ್ಳಿಯ ಅಶೋಕನಗರದ ಠಾಣೆಯ ಸಬ್ ಇನ್ಸಪೆಕ್ಟರ್ ಆಗಿ 41 ವರ್ಷಗಳ ಸೇವೆ ನಂತರ ನಿವೃತ್ತರಾಗಿದ್ದಾರೆ ಎಂದರು.
ಸಂಗಮೇಶ ಜಕ್ಕನಗೌಡರು ಹಾಗೂ ಅವರ ಪತ್ನಿ ಶಾಂತಾ ಇಬ್ಬರೂ ಧಾಮಿರ್ಕ ಮನೋಭಾವದವರು ಎಂದರು.
ಭೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವ್ಯಾಪಾರಸ್ಥರು ಹಾಗೂ ಪರಿಸರ ಪ್ರೇಮಿ ಚನ್ನು ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ.ಎಸ್. ಪಲ್ಲೆದ, ಹನುಮಂತಪ್ಪ ಉಳ್ಳಿ, ಶಾಂತರಾಜ, ಜಾನಪದ ಕಲಾವಿದ ಕುಬೇರಗೌಡ, ಮುರಳಿಕುಮಾರಿ, ಪವಿತ್ರ ಕುರ್ತಕೋಟಿ ಇವರನ್ನು ಸನ್ಮಾನಿಸಲಾಯಿತು.
ಎಸ್.ಕೆ. ಜಂಗ್ಲಪ್ಪಗೌಡರ, ಎಂ.ಸಿ. ಸೂರಗೊಂಡ, ಅಶೋಕ ಬಾಳಿಕಾಯಿ, ಬಸವರಾಜ ಯಕಲಾಸಪೂರ, ಅಜ್ಜಪ್ಪ ಹೊರಕೇರಿ ಪಾಲ್ಗೊಂಡಿದ್ದರು.
ಶಿವಸ್ವಾಮಿ ಹಿರೇಮಠ ಸಂಗೀತ ಗಾಯನ ನಡೆಸಿಕೊಟ್ಟರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಎ.ಬಿ. ಕೊಪ್ಪದ ಸ್ವಾಗತಿಸಿದರು. ಗದಿಗಯ್ಯ(ಜೀವಿ) ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಮು ಮೂಲಗಿ ವಂದಿಸಿದರು.