ಜೀವಿ ಅವರಿಗೆ ಜಕ್ಕನಗೌಡ್ರ ದತ್ತಿ ಪ್ರಶಸ್ತಿ ಪ್ರದಾನ

New JIVI New
Published on

ಹುಬ್ಬಳ್ಳಿ : ಮಾತೋಶ್ರೀ ಅಂದಮ್ಮ ಸಿದ್ದನಗೌಡ ಜಕ್ಕನಗೌಡ್ರ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಯನ್ನು ಸಾಹಿತಿ, ನಾಟಕಕಾರ ಗದಿಗೆಯ್ಯ ವಿ. ಹಿರೇಮಠ (ಜೀವಿ) ಅವರಿಗೆ ಪ್ರದಾನ ಮಾಡಲಾಯಿತು.

ಜನಪದರು ಕರ್ನಾಟಕ, ಜಾನಪದ ಜಗತ್ತು ಟ್ರಸ್ಟ್ ವತಿಯಿಂದ ನಗರದ ಬೈರಿದೇವರಕೊಪ್ಪದ ಬಳಿಗಾರ ಹಕ್ಕಲದಲ್ಲಿರುವ ಕಲ್ಪತರು ನಿಲಯದ ಜಾನಪದ ಜಗಲಿ ಸಭಾಭವನದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ತವನಪ್ಪನವರ ಅವರು ಜೀವಿ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿದರು.

ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಪ್ರತಿಭಾವಂತರು ಬೆಳೆಯ ಬೇಕಾದರೆ ಇಂತಹ ಪ್ರಶಸ್ತಿಗಳು ಇರಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ರಾಮು ಮೂಲಗಿ ಅವರು ಪ್ರತಿಭಾವಂತರನ್ನು ಪ್ರಾಮಾಣಿಕವಾಗಿ ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡುತ್ತಿದ್ದಾರೆ ಎಂದರು.

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಚ್. ನದಾಫ ಅವರು ಪ್ರಶಸ್ತಿಗೆ ಭಾಜನರಾದ ಜೀವಿ ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು.

ದತ್ತಿ ಪ್ರಶಸ್ತಿ ನೀಡಿ ಮಾತನಾಡಿದ ಆರ್.ಟಿ. ತವನಪ್ಪನವರ, ಅದ್ಭುತ ಪ್ರತಿಭಾನ್ವಿತರಾದ ಜೀವಿ ಅವರಿಗೆ ಪ್ರಶಸ್ತಿ ದೊರಕಿರುವುದು ಸಂತಸ ಮೂಡಿಸಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೀವಿ, ಪ್ರಶಸ್ತಿಯಿಂದಾಗಿ ನನ್ನ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಿವೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಚುಣಾವಣೆಯಲ್ಲಿ ಗೆಲುವು ಸಾಧಿಸಿದ ಡಾ. ಮಹೇಶ ಹೊರಕೇರಿ, ಕೃಷಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಡಿ.ಟಿ. ಪಾಟೀಲ, ಶಿಕ್ಷಕರ ಕ್ಷೇತ್ರದಲ್ಲಿ ಸಿ.ಎನ್.ಆರ್.ರಾವ್ ಪ್ರಶಸ್ತಿಗೆ ಭಾಜನರಾದ ಲಿಂಗರಾಜ ರಾಮಾಪೂರ, ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದ ಪಲ್ಲವಿ ಬಸವರಾಜ ನೆಲ್ಲೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದರು.

ಡಾ.ರಾಮು ಮೂಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶರಣಪ್ಪ ಕೊಟಗಿ, ಉದ್ಯಮಿ ಬಸವರಾಜ ಸುಳ್ಳದ, ವಿಮಲಕೀರ್ತಿ ತಾಳಿಕೋಟಿ, ವಿ.ಜಿ. ಪಾಟೀಲ, ಆರ್.ಎಂ. ಹಿರೇಮಠ, ರವೀಂದ್ರನಾಥ ದೊಡ್ಡಮೇಟಿ, ಎ.ಬಿ. ಕೊಪ್ಪದ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net