

ಲಕ್ಷ್ಮೇಶ್ವರ: ದೇಶದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಪರಂಪರೆಯ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಜರಾಮರ ಎಂದು ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರ ಪಂಚ ಕಸುಬುಗಳು ನಾಗರಿಕರ ಬದುಕಿಗೆ ಆಧಾರ ಸ್ತಂಭವಾಗಿವೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಕಲೆಯನ್ನು ಕೌಶಲದ ಮೂಲಕ ಕಲ್ಲು, ಕಟ್ಟಿಗೆ ಇತರ ವಸ್ತುಗಳಲ್ಲಿ ಜೀವಂತವಾಗಿರಿಸಿದ್ದರಿಂದಲೇ ಅವರು ಅಮರಶಿಲ್ಪಿಯಾಗಿದ್ದಾರೆ ಎಂದರು.
ವಿಶ್ವಕರ್ಮ ಸಮಾಜದ ಗುರುಗಳಾದ ಸೂರಣಗಿಯ ಭಾಸ್ಕರ್ ಸ್ವಾಮೀಜಿ ಮಾತನಾಡಿ, ದೇಶದ ಸಾಂಸ್ಕೃತಿಕ, ಧಾರ್ವಿುಕ ಲೋಕದ ಶ್ರೀಮಂತಿಕೆಗೆ ಕಾರಣರಾದ ಜಕಣಾಚಾರಿ ಅವರ ಕುರಿತ ಅಧ್ಯಯನ, ಸಂಶೋಧನೆಗೆ ಸರ್ಕಾರ ಮುಂದಾಗಬೇಕು ಎಂದರು.
ಸೂರಣಗಿ ಗ್ರಾಮದ ಮೌನೇಶ ಚನ್ನಪ್ಪ ಬಡಿಗೇರ ಅವರ ವೃತ್ತಿ ಸೇವೆ ಪರಿಗಣಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದಿಂದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜದ ತಾಲೂಕು ಅಧ್ಯಕ್ಷ ಈರಣ್ಣ ಬಡಿಗೇರ, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಬಾಸ್ಕರ್ ಸೊರಟೂರ, ರಾಮಚಂದ್ರ ಬಡಿಗೇರ, ಗಂಗಾಧರ ಬಾಲೆಹೊಸೂರ, ಮೋಹನ್ ಸುತಾರ, ಮೌನೇಶ ಬಾಲೆಹೊಸೂರ, ದೇವಿಂದ್ರಪ್ಪ ಬಾಲೆಹೊಸೂರ, ಧರ್ಮಣ್ಣ ಬಡಿಗೇರ, ಗಣೇಶಪ್ಪ ಹುಲಬಜಾರ, ಅಶೋಕ ಸೊರಟೂರ, ಬಸಣ್ಣ ಬಡಿಗೇರ, ಶ್ರೀಧರ್ ಪತ್ತಾರ, ಪ್ರೇಮಕ್ಕ ಬಡಿಗೇರ, ಶಶಿಕಲಾ ಬಡಿಗೇರ, ಉಮ್ಮಕ್ಕ ಸೊರಟೂರ, ಭಾಗ್ಯಶ್ರೀ ಬಡಿಗೇರ, ಶ್ರೀಕಾಂತ ಪತ್ತಾರ, ರಮೇಶ ಬಡಿಗೇರ, ಮನೋಹರ ಪತ್ತಾರ ಇದ್ದರು.