ಜಕಣಾಚಾರಿ ಶಿಲ್ಪಕಲೆ ಉಳಿಯಲಿ

1ATHANIGERAMIN1
Published on

ಅಥಣಿ ಗ್ರಾಮೀಣ: ಅಮರ ಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಅಮರಶಿಲ್ಪಿ ಜಕಣಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿ, ಜಕನಾಚಾರ್ಯರು ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ. ಕೆತ್ತನೆಗೆ ಅವರ ಕೊಡುಗೆ ಅಪಾರ ಎಂದರು.

ಮುಖಂಡ ಸುಭಾಷ ಸೋನಕರ ಮಾತನಾಡಿದರು. ವಿರೂಪಾಕ್ಷ ಕಾಡದೇವರಮಠ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ಗುಳಪ್ಪ ಪೂಜಾರಿ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಸಂಜು ಬಡಿಗೇರ, ಕಲ್ಲಪ್ಪ ಬಡಿಗೇರ, ಆನಂದ ಪತ್ತಾರ, ಗಂಗಾಧರ ಬಡಿಗೇರ, ಶ್ರೀಶೈಲ್ ದೊಡಮನಿ, ಕಲ್ಲಪ್ಪ ಪತ್ತಾರ, ಶಿವರಾಮ ಹೊನಕಾಂಬಳೆರ, ಖಾದರ್ ಮುಲ್ಲಾ, ಈಶ್ವರ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net