ಜಕಣಾಚಾರಿ ಜಯಂತಿ ಪೂರ್ವಭಾವಿ ಸಭೆ


ಸರಗೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಕಣಾಚಾರಿ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ರುಕೀಯಾ ಬೇಗಂ, ಜಿ.ರವಿ, ಶ್ರೀನಿವಾಸ, ಎಸ್.ಲೋಕೇಶ್, ಬಾಡಗ ರವಿಕುಮಾರ್, ಹೊಸಬೀರವಾಳು ಸೋಮಚಾರ್, ಮಂಜುನಾಥ್ ಮತ್ತಿತರರಿದ್ದರು.
ಸರಗೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಕಣಾಚಾರಿ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ರುಕೀಯಾ ಬೇಗಂ, ಜಿ.ರವಿ, ಶ್ರೀನಿವಾಸ, ಎಸ್.ಲೋಕೇಶ್, ಬಾಡಗ ರವಿಕುಮಾರ್, ಹೊಸಬೀರವಾಳು ಸೋಮಚಾರ್, ಮಂಜುನಾಥ್ ಮತ್ತಿತರರಿದ್ದರು.
Published on

ಸರಗೂರು: ಹೊಸ ವರ್ಷದ ಆರಂಭದ ದಿನ ಜ.1ರಂದು ನಡೆಯಲಿರುವ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ ಸಂಬಂಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಜಕಣಾಚಾರಿ ಜಯಂತಿಯನ್ನು ಅಚ್ಚುಕಟ್ಟಾಗಿ ನಡೆಸಲು ಸಾರ್ವಜನಿಕರ ಸಹಕಾರ ಅಗತ್ಯ. ಜತೆಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈ ಜೋಡಿಸಬೇಕು ಎಂದರು.

ವಿಶ್ವಕರ್ಮ ಸಮಾಜದ ಪಟ್ಟಣದ ಘಟಕದ ಅಧ್ಯಕ್ಷ ನಟರಾಜಚಾರ್ ಮಾತನಾಡಿ, ಎಲ್ಲಾ ಸಮುದಾಯದ ಮುಖಂಡರು ಎಲ್ಲಾ ರಾಷ್ಟೀಯ ಹಬ್ಬಗಳಲ್ಲಿ ಪಾಲ್ಗೊಳ್ಳಬೇಖು. ರಾಷ್ಟೀಯ ನಾಯಕರು ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಅಲ್ಲದೆ ಇಂತಹ ಸಭೆಗಳಿಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರು.

ಸಮಾಜದ ಗೌರವಾಧ್ಯಕ್ಷ ಜಿ.ರವಿ, ಉಪಾಧ್ಯಕ್ಷ ಶ್ರೀನಿವಾಸ, ವಿಶ್ವಕರ್ಮ ಸೇನಾ ಸಮಿತಿ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಬಾಡಗ ರವಿಕುಮಾರ್, ಮುಖಂಡರಾದ ಹೊಸಬೀರವಾಳು ಸೋಮಚಾರ್, ಮಂಜುನಾಥ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ವೈ.ಡಿ.ರಾಜಣ್ಣ, ಎಪಿಎಂಸಿ ಕಾರ್ಯದರ್ಶಿ ವಸಂತಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಗೋವಿಂದರಾಜು, ಶೀರಸ್ತೇದಾರ್ ಗುರುರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net