ಜಿನಭಕ್ತಿಯಲ್ಲಿ ಸಂಭ್ರಮಿಸಿದ ಶ್ರಾವಕಿಯರು

dash laxan
Published on

ಹುಬ್ಬಳ್ಳಿ: ದಿಗಂಬರ ಜೈನ ಸಮಾಜದ ವತಿಯಿಂದ ನಗರದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಜೈನರು ಆಚರಿಸುವ ಆತ್ಮ ಗುಣಗಳ ಆರಾಧನೆಯ ದಶಲಕ್ಷಣ ಪರ್ವದ 10ನೇ ದಿನ ಪೂಜಾ ವಿಧಾನಗಳು ಜರುಗಿದವು.

ನೂರಾರು ಶ್ರಾವಕಿಯರು ಪಾಲ್ಗೊಂಡು, ಶ್ರದ್ಧೆ, ಭಕ್ತಿ ಸಹಿತ ಜಿನೇಂದ್ರ ಭಕ್ತಿ ಮಾಡಿದರು. ಆತ್ಮನ ದಶಗುಣ ಲಕ್ಷಣಗಳನ್ನು ಸ್ಮರಿಸಿ ಅವು ಆತ್ಮಗತವಾಗಲು ಪ್ರಾರ್ಥಿಸಿದರು. ಸಂಗೀತ ಸೇವೆ ನೀಡಿದ ಶ್ರವಣಬೆಳಗೊಳದ ರವಿರಾಜ್ ಜೈನ, ಹುಬ್ಬಳ್ಳಿಯ ಮೌನೇಶ ಅವರನ್ನು ಸನ್ಮಾನಿಸಲಾಯಿತು.

ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಶಾಂತಿನಾಥ ಹೋತಪೇಟಿ, ಶ್ರೇಣಿಕರಾಜ್ ರಾಜಮಾನೆ, ಆರ್. ಟಿ. ತವನಪ್ಪನವರ,

ರಾಮಚಂದ್ರ ದಿನಕರ, ಮನ್ಮಥ ಕ್ಯಾಸಾ, ಅಭಿನಂದನ ವನಕುದರೆ, ಸಂತೋಷ ಸೂಜಿ, ನಯನ ಗೋಟಡಕಿ, ಮೀನಾ ಬಾಗಿ, ಸುಜಾತಾ ಗೌಡ, ಉಷಾ ಬೀಳಗಿ, ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net