ಜೈನ ಧರ್ಮದ ಸಂದೇಶ ವಿಶ್ವಕ್ಕೆ ಮಾದರಿ

06Huk1-Web
ಹುಕ್ಕೇರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಮಹಾವೀರ ಜಯಂತಿ ನಿಮಿತ್ತ ಹಣ್ಣು ವಿತರಿಸಲಾಯಿತು. ಬಾಹುಬಲಿ ಸೊಲ್ಲಾಪುರೆ, ರಾಜೇಂದ್ರ ಅಡಕೆ, ರೋಹಿತ ಚೌಗಲಾ, ಸಂಜು ಅಡಕೆ, ರವೀಂದ್ರ ಬಸ್ತವಾಡೆ, ಅಣ್ಣಾಸಾಹೇಬ ಖತಗಲ್ಲಿ ಇತರರು ಇದ್ದರು.
Published on

ಹುಕ್ಕೇರಿ: ಭಗವಾನ ಮಹಾವೀರರು ಹೇಳಿದ ಮಾತುಗಳು ಇಂದು ಸತ್ಯವಾಗಿವೆ. ಜೀವಿಸು, ಜೀವಿಸಲು ಬಿಡು ಎಂಬ ಜೈನ ಧರ್ಮದ ಆಳವಾದ ಮುಂದಾಲೋಚನೆಗೆ ಇಡೀ ವಿಶ್ವವೇ ತಲೆಬಾಗಿದೆ ಎಂದು ಸ್ಥಳೀಯ ಪೇಟೆ ಬೀದಿ ಆದಿನಾಥ ಮತ್ತು ಪಾರ್ಶ್ವನಾಥ ದಿಗಂಬರ ಜೈನ ಮಂದಿರದ ಅಧ್ಯಕ್ಷ ಬಾಹುಬಲಿ ಸೊಲ್ಲಾಪುರೆ ಹೇಳಿದ್ದಾರೆ.

ಭಗವಾನ ಮಹಾವೀರ ಜಯಂತಿ ಅಂಗವಾಗಿ ಸೋಮವಾರ ಕರೊನಾ ಸೋಂಕು ನಿಯಂತ್ರಿಸಲು ಶ್ರಮಿಸುತ್ತಿರುವ ತಾಲೂಕಾಡಳಿತ, ಪೊಲೀಸ್, ವೈದ್ಯಕೀಯ, ಪೌರ ಮತ್ತು ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಗೆ ಊಟೋಪಚಾರ, ಹಣ್ಣು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿ ಮಾತನಾಡಿದರು.

ಉಪಾಧ್ಯಕ್ಷ ರಾಜೇಂದ್ರ ಅಡಕೆ ಮತ್ತು ಬೋರಗಾಂವ ಅರಿಹಂತ ಜವಳಿ ಕಾರ್ಖಾನೆ ನಿರ್ದೇಶಕ ರೋಹಿತ ಚೌಗಲಾ ಮಾತನಾಡಿ, ಜೈನ ಧರ್ಮ ಆಚರಿಸುತ್ತಿರುವ ವಿವಿಧ ಪದ್ಧತಿಗಳು ಇಂದಿನ ಮಾರಕ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗಿವೆ ಎಂದರು. ನ್ಯಾಯವಾದಿ ರಾಜು ಚೌಗಲಾ, ಸಂಜು ಅಡಕೆ, ರವೀಂದ್ರ ಬಸ್ತವಾಡೆ, ಅಶೋಕ ಚಿಕ್ಕೋಡಿ, ಅಣ್ಣಾಸಾಹೇಬ ಖತಗಲ್ಲಿ, ಡಾ. ಬಿ.ಆರ್. ಹಂದೂರ, ನೇಮಿನಾಥ ಉಗಾರೆ, ರಾವಸಾಹೇಬ ಪಾಟೀಲ, ಮಂಜುಳಾ ಅಡಕೆ, ಪ್ರಿಯಾ ಖತಗಲ್ಲಿ ಹಾಗೂ ಶ್ರಾವಕ, ಶ್ರಾವಕಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net