ಡಾ. ಶಾಂತಿನಾಥ ದಿಬ್ಬದ ಅಭಿಪ್ರಾಯ; ಪ್ರಾಚೀನ ಅಧ್ಯಯನಕ್ಕೆ ಜೈನ ಕಾವ್ಯ ಪೂರಕ

11 Dwd 1
Published on

ಧಾರವಾಡ: ಪ್ರಾಚೀನ ಜೈನ ಕಾವ್ಯಗಳಲ್ಲಿ ಅಂದಿನ ರಾಜಕೀಯ, ಆಡಳಿತ, ಧರ್ಮ, ಸಂಸ್ಕೃತಿ ವಿಷಯಗಳು ಕಾಣಸಿಗುತ್ತವೆ. ಅಂದಿನ ಕಾಲದ ಅಧ್ಯಯನಕ್ಕೆ ಪ್ರಾಚೀನ ಜೈನ ಕಾವ್ಯಗಳು ಪೂರಕವಾಗಿವೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಹೇಳಿದರು.
ನಗರದ ವಿದ್ಯಾಗಿರಿ ಜೆ.ಎಸ್.ಎಸ್. ಸಂಸ್ಥೆಯ ಡಿ.ಆರ್.ಎಚ್. ಸಭಾಭವನದಲ್ಲಿ ಜೆ.ಎಸ್.ಎಸ್. ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರ ಹಾಗೂ ಬಸು ಪ್ರಕಾಶನದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಜೈನಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ' ವಿಷಯ ಕುರಿತ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಜೈನ ಪರಂಪರೆಗಳ ಕುರಿತು ನಿಖರವಾದ ಅಧ್ಯಯನಗಳು ನಡೆಯಬೇಕಿದೆ. ಅದಕ್ಕಾಗಿ ಹೊಸ ತಲೆಮಾರಿನ ಸಂಶೋಧಕರು ವಿಭಿನ್ನ ಆಯಾಮಗಳಲ್ಲಿ ಅಭ್ಯಸಿಸುವ ಕ್ರಮ ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸಿದ್ದು ಅಲಗೂರ ಮಾತನಾಡಿ, ಜೈನ ಧರ್ಮ ಕರ್ನಾಟಕಕ್ಕೆ ಉತ್ತರ ಭಾರತದಿಂದ ಬಂದದ್ದು. ಆದರೆ, ಕರ್ನಾಟಕದಲ್ಲಿ ಜೈನಧರ್ಮದ ಪ್ರಯೋಗಗಳು ಉತ್ತರ ಭಾರತಕ್ಕಿಂತ ಭಿನ್ನವಾಗಿವೆ. ಒಂದು ಅಂದಾಜಿನ ಪ್ರಕಾರ ೪೫೦ಕ್ಕೂ ಹೆಚ್ಚು ಕವಿಗಳು ೫೨೦ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಪ್ರತಿಯೊಂದು ಕೃತಿಯೂ ವಿಶೇಷತೆ ಹೊಂದಿದೆ. ಅದನ್ನು ಪುನರ್ ಅವಲೋಕಿಸುವ ವಿಚಾರ ಸಂಕಿರಣಗಳು ನಡೆಯಬೇಕು ಎಂದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜನಾಽಕಾರಿ ಡಾ. ಜೆ.ಎ. ಹಡಗಲಿ, ಸಂಶೋಧನಾ ಮಾರ್ಗದರ್ಶಕರಾದ ಡಾ. ವೈ.ಎಂ. ಭಜಂತ್ರಿ, ಡಾ. ಬಿ.ಜಿ. ಬಿರಾದಾರ, ಡಾ. ಎಚ್. ವಿಷ್ಣುವರ್ಧನ, ಡಾ. ವಿ.ಜಿ. ಪೂಜಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಧ್ಯಾಪಕರಾದ ದೀಪಾ ಸಂಕಪಾಳೆ, ಬಸಲಿಂಗಪ್ಪ ಅರವಳದ, ಧಾರವಾಡ ಜೈನ ಮಿಲನ್ ಪದಾಽಕಾರಿಗಳಾದ ಸುಜಾತಾ ಹಡಗಲಿ, ಸಂಗೀತಾ ಉಪಾಧ್ಯೆ, ಸುನಂದಾ ವರೂರ, ಇತರರಿದ್ದರು.
ಡಾ. ಅಕ್ಕಮಹಾದೇವಿ ರೊಟ್ಟಿಮಠ, ಶಮಂತಕುಮಾರ ಕೆ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ವಿ.ಜಿ. ಪೂಜಾರ ನಿರೂಪಿಸಿದರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net