ಜೈನಮುನಿ ಹತ್ಯೆ ಅಮಾನುಷ ಕೃತ್ಯ

haruhara jainamuni
Published on

ಹರಿಹರ: ಜೈನಮುನಿ ಹತ್ಯೆ ಖಂಡಿಸಿ ಹರಿಹರದ ಜೈನ ಸಮುದಾಯ ಮತ್ತು ಭಗವಾನ್ ಶ್ರೀ ಪಾರ್ಶ್ವನಾಥ ಜೈನ ದಿಗಂಬರ ಟ್ರಸ್ಟ್ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ದೇವಸ್ಥಾನ ರಸ್ತೆಯ ಜೈನ ಮಂದಿರದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕಚೇರಿಗೆ ಆಗಮಿಸಿ, ತಹಸೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಜಿ.ಬಿ.ಜೀನಚಂದ್ರ ಮಾತನಾಡಿ, 15 ವರ್ಷಗಳಿಂದ ಧಾರ್ಮಿಕ ಸೇವೆ ಮಾಡುತ್ತ ಬಂದಿರುವ ಜೈನಮುನಿಯ ಹತ್ಯೆ ಅಮಾನುಷ ಕೃತ್ಯವಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಜೈನ ಸಮುದಾಯದ ಕೆ.ಪಿ. ಗುರುಪಾಲ್, ಜಿ.ಬಿ.ಶಾಂತರಾಜು, ಬಿ.ಎಸ್.ಮಹಾವೀರ್, ಜೀನಚಂದ್ರ, ಮಹಾವೀರ್, ಶ್ವೇತಾ, ಪ್ರಭಾ, ಪುಷ್ಪಾ ಸತೀಶ್ ಇಜಾರಿ, ಬಾಲಕೃಷ್ಣ ಮಹಿಶ್ಕರ್ ಇತರರಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net