ಉಪವಾಸ ವ್ರತ ಅಂತ್ಯ

31 Dwd 13
Published on

ಧಾರವಾಡ: ಚಾತುರ್ಮಾಸ್ಯದ ಅಂಗವಾಗಿ ಆತ್ಮಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ನಗರದ ಪ್ರಭಾ ಹೇಮರಾಜ ಭಂಡಾರಿ ಅವರು ಜೈನ ಧರ್ಮದ ಪುಣ್ಯಕ್ಷೇತ್ರವಾದ ಗುಜರಾತ್‌ನ ಪಾಲಿತಾನಾದಲ್ಲಿ 30 ದಿನಗಳ ನಿರಂತರ ಉಪವಾಸ ಕೈಗೊಂಡಿದ್ದರು. ಪ್ರಭಾ ಭಂಡಾರಿ ಅವರ ಉಪವಾಸ ವ್ರತ ಗುರುವಾರ ಸಂಪನ್ನಗೊ0ಡಿತು. ಅವರು ದಿನಕ್ಕೆ ಕೇವಲ 2 ಬಾರಿ ನೀರು ಸೇವನೆ ಮಾಡುವ ಮೂಲಕ 30 ದಿನಗಳವರೆಗೆ ಕಠಿಣ ಉಪವಾಸ ಕೈಗೊಂಡಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net