

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರದ ಜೈನ ಸೇವಾ ಸಮಿತಿ ವತಿಯಿಂದ ಸರಸ್ವತಿ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಗ್ರಾಮಸ್ಥರು ಮೂರ್ತಿಯ ಭವ್ಯ ಮೆರವಣಿಗೆ ಏರ್ಪಡಿಸಿದ್ದರು. ಪುಷ್ಪಾದೇವಿ ಸುಮೇರಮಲಜಿ ಮುನೋತ್ ಅವರು ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೇವಾ ಮತ್ತು ಶಿಕ್ಷಣದ ಈ ಯೋಜನೆಯ ಅಧ್ಯಕ್ಷ ಪ್ರವಿಣ ಗಾಡಿಯಾ ಮತ್ತು ವಿಕ್ರಮ್ ಬಾಗ್ರೇಚಾ, ಹೇಮಲ್ ಚೋಪ್ರಾ, ಉಪಾಧ್ಯಕ್ಷ ಕಿಶೋರ್ ಕಾನುಂಗಾ ಅವರು ಮೆರವಣಿಗೆಯ ಧ್ವಜಾರೋಹಣ ನೆರವೇರಿಸಿದರು.
280 ವಿದ್ಯಾಥಿರ್ಗಳಿಗೆ ಶಾಲಾ ಸಾಮಗ್ರಿ ವಿತರಿಸಲಾಯಿತು. ಸಂಸ್ಥೆಯ ಸಹ ಕಾರ್ಯದರ್ಶಿ ಹಿತೇಶ್ ಮುನೋತ್ ಹಾಗೂ ಇತರರು ಮಂಗಳಾರತಿ ನೆರವೇರಿಸಿದರು. ಜೈನ ಸೇವಾ ಸಮಿತಿಯಿಂದ ಪ್ರಸಾದ ವಿತರಿಸಲಾಯಿತು.
ಅತಿಥಿಯಾಗಿದ್ದ ಅಜಯ್ ಜೈನ್, ಸಂತೋಷ್ ಬನ್ಸಾಲಿ, ಸುರೇಶ್ ಸಿ. ಜೈನ್, ಮುದಿತ್ ಮಾಂಗ್ಲಿಕ್ ಅವರನ್ನು ಸಂಸ್ಥಾಪಕ ಅಧ್ಯಕ್ಷ ಮಹಾವೀರ ಪಾಲ್ರೇಚಾ ಸತ್ಕರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರವಿಣ ಬಾಗ್ರೇಚಾ ಅವರು, ಇದುವರೆಗಿನ ಸೇವಾ ಕಾರ್ಯಗಳನ್ನು ಪ್ರಸ್ತುತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಕಮಲೇಶ್ ಜೈನ್ ಸ್ವಾಗತಿಸಿದರು. ಸಿಎ ದಿನೇಶ್ ಜೈನ್ ವಂದಿಸಿದರು.