

ಸಿರಗುಪ್ಪ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತಾಶ್ರಮದ ಶ್ರೀ 108ನೇ ಜೈನಮುನಿ ಕಾಮಕುಮಾರ ನಂದಿ ಹತ್ಯೆ ಮಾಡಿದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲೂಕು ಜೈನ ಸಮುದಾಯದವರು ಶಿರಸ್ತೆದಾರ ಸಿದ್ದಲಿಂಗಸ್ವಾಮಿಗೆ ಗುರುವಾರ ಮನವಿ ಸಲ್ಲಿಸಿದರು.
ಜೈನ ಸಮುದಾಯ ತಾಲೂಕಾಧ್ಯಕ್ಷ ಅಶೋಕ್ ಜೈನ್ ಮಾತನಾಡಿ, ನಂದಿಪರ್ವತ ಆಶ್ರಮದಲ್ಲಿದ್ದ ಶ್ರೀ 108ನೇ ಜೈನಮುನಿ ಕಾಮಕುಮಾರ ನಂದಿ ಅವರ ಹತ್ಯೆ ಮಾಡಿರುವುದನ್ನು ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಪೂಜ್ಯರ ಮೇಲೆ ಇಂತಹ ದುಷ್ಕೃತ್ಯ ನಡೆದಿರುವುದು ನಮಗೆ ದಿಗ್ರ್ಭಾಂತಿ ಉಂಟು ಮಾಡಿದೆ. ನಿಷ್ಪಕ್ಷಪಾತವಾಗಿ ಸರ್ಕಾರವು ತನಿಖೆ ನಡೆಸಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಕಿರಣ್‌ಕುಮಾರ್ ಜೈನ್, ಪ್ರದೀಪ್ ಜೈನ್, ಪ್ರವೀಣ್ ಜೈನ್, ಈಶ್ವರ್, ಜೈನ್, ಶುಭಾಷ್ ಜೈನ್, ವಿಕ್ರಮ್ ಜೈನ್ ಇದ್ದರು.