ಜೈನ ಮುನಿಗಳ ಹಂತಕರಿಗೆ ಕಠಿಣ ಶಿಕ್ಷೆ ನೀಡಲು ಶ್ರೀಶೈಲ ಜಗದ್ಗುರುಗಳಿಂದ ಒತ್ತಾಯ

IMG-20230712-WA0129.jpg
Published on

ಬೆಳಗಾವಿ : ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯಲ್ಲಿ ದುಷ್ಕರ್ಮಿಗಳು ಜೈನ ಮುನಿಗಳನ್ನು ಬರ್ಬರ ಹತ್ಯೆ ಮಾಡಿದ್ದು ದಂಡನೀಯ ಅಪರಾಧವಾಗಿದೆ. ಇದನ್ನು ಕಠೋರ ಮನಸ್ಸಿನಿಂದ ಖಂಡಿಸುತ್ತೇವೆ. ಹತ್ಯೆಗೈದವರಿಗೆ ಕಠಿಣ ಶಿಕ್ಚೆ ವಿಧಿಸಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.

ಹಣದ ವ್ಯವಹಾರ ಏನೇ ಇದ್ದರೂ ಕೆಲವರ ಮಧ್ಯಸ್ಥಿಕೆ ಮೂಲಕ ಅದನ್ನು ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ ಕೊಲೆ ಮಾಡುವ ಹಂತಕ್ಕೆ ಬಂದದ್ದು ಮಹಾಪಾಪದ ಕೃತ್ಯ. ಅನ್ಯಮತೀಯರು ಇದರಲ್ಲಿ ಭಾಗಿಯಾಗಿದ್ದು ಇದರ ಹಿಂದೆ ಮತ್ಯಾವುದೋ ಕುತಂತ್ರ ಇರಬಹುದೆಂಬ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಸರ್ಕಾರ ಇದನ್ನು ನಿಷ್ಪಕ್ಷಪಾತವಾಗಿ ಸಂಪೂರ್ಣ ವಿಚಾರಣೆಗೊಳಪಡಿಸಿ ಸಂಬಂಧಪಟ್ಟವರನ್ನೆಲ್ಲ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಶಾಂತಿ ಸಹನೆಗೆ ವಿಶ್ವದ ತುಂಬೆಲ್ಲ ಹೆಸರಾದ ಭಾರತ ದೇಶದಲ್ಲಿಯೇ, ಅಂಹಿಸಾ ಪ್ರತಿಪಾದಕ ಸಂನ್ಯಾಸಿಗಳಿಗೆ ಈ ಪರಿಸ್ಥಿತಿಯಾದರೆ, ಸಂತರು, ಸಂನ್ಯಾಸಿಗಳು, ತಪಸ್ವಿಗಳು ಎಲ್ಲಿ ಸುರಕ್ಷಿತರಾಗಿರಲು ಸಾಧ್ಯ! ಎಂಬ ಆತಂಕ ಸಂತರ ಮನಸ್ಸಿನಲ್ಲಿ ಸಹಜವಾಗಿ ಒಡಮೂಡುತ್ತದೆ. ಇಂತಹ ಘಟನೆಗಳು ಭಾರತದಲ್ಲಿ ಎಲ್ಲಿಯೂ ಮತ್ತೆ ನಡೆಯದಂತೆ ಸಂತರನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸರ್ಕಾ ಕಟ್ಟುನಿಟ್ಟಾಗಿ ಪರಿಪಾಲಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net