

ಗುರುಪುರ: ಭಾರತೀಯ ಜೈನ್ ಮಿಲನ್‌ನ ಕುಪ್ಪೆಪದವು ಶಾಖೆ ಅನಂತ ಪಾರ್ಶ್ವ ಜೈನ್ ಮಿಲನ್ ಮಾಸಿಕ ಸಭೆ ಭಾನುವಾರ ಇರುವೈಲ್‌ನ ಕನ್ನೆಪದವು ಗ್ರಾಮದ ಬಾವದಬೈಲುವಿನಲ್ಲಿ ಜರುಗಿತು.
ಪ್ರೊ.ಅಕ್ಷಯ್ ಕುಮಾರ್ ಜೈನ್ ಮಾತನಾಡಿ, ಸಾಮ್ರಾಟ ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದಿದ್ದ ಸಂದರ್ಭ ಜೈನ ಧರ್ಮದ ತತ್ವ ಸಿದ್ಧಾಂತದಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಲ್ಲದೆ, ಜೈನ ವಿದ್ವಾಂಸರನ್ನು ಗ್ರೀಕ್ ದೇಶಕ್ಕೆ ಕರೆದುಕೊಂಡು ಹೋಗಲು ಬಯಸಿದ್ದ ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ ಎಂದರು.
ಸ್ಥಾಪಕಾಧ್ಯಕ್ಷ ಭೋಜರಾಜ ಜೈನ್ ‘ಪಂಚ ನಮಸ್ಕಾರ’ ನಮೋಕಾರ ಮಂತ್ರದ ಬಗ್ಗೆ ವಿವರಿಸಿದರು. ಸ್ವರ್ಣಲತಾ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಅಗರಿ, ಭರತ್ ಕುಮಾರ್ ದಂಪತಿ, ಕೋಶಾಧಿಕಾರಿ ವನಿತಾ ಬಿ., ಮಳಲಿ ಉದಯ ಕುಮಾರ್ ಉಪಸ್ಥಿತರಿದ್ದರು. ಚರಣ್ ಕಾರ್ಯಕ್ರಮ ನಿರೂಪಿಸಿದರು. ವಕೀಲ ಅತಿಶಯ ಜೈನ್ ವಂದಿಸಿದರು.