ಡಾ. ಹೆಗ್ಗಡೆ ಕುಟುಂಬದ ಅವಹೇಳನ ಖಂಡನೆ

web 1
Published on

ಧಾರವಾಡ: ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಚಾರತ್ರ್ಯ ಹರಣ ಮಾಡುತ್ತಿರುವುದನ್ನು ನಗರದ ಭಾರತೀಯ ಜೈನ್ ಮಿಲನ್ ವಲಯ ಖಂಡಿಸಿದೆ.
ಡಾ. ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. 10 ವರ್ಷಗಳ ಹಿಂದಿನ ಸೌಜನ್ಯ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಹೆಗ್ಗಡೆಯವರ ಕುಟುಂಬಕ್ಕೆ ಮಸಿ ಬಳಿಯಾಗುತ್ತಿದೆ. ಕೆಲವರು ವಾಕ್ ಸ್ವಾತಂತ್ರ್ಯದ ೋರ ದುರ್ಬಳಕೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಪದಾಧಿಕಾರಿಗಳು ಮತ್ತು ಜೈನ ಸಮಾಜ ಡಾ. ಹೆಗ್ಗಡೆಯವರ ಕುಟುಂಬದ ಜೊತೆಗೆ ಇರುತ್ತದೆ. ವಿನಾಕಾರಣ ಅವಹೇಳನ ಮಾಡುತ್ತಿರುವ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೈನ್ ಮಿಲನ್ ಉಪಾಧ್ಯಕ್ಷ ವಿ. ಜೀವಂಧರ್ ಕುಮಾರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net