ಜೈನ ಮಠಗಳಿಗೂ ಸರ್ಕಾರ ನೆರವು ನೀಡಲಿ

web 5
Published on

ಸೊರಬ: ಮಕರ ಸಂಕ್ರಾಂತಿ ಅಂಗವಾಗಿ ತಲಗಡ್ಡೆಯ ದಿಗಂಬರ 1008 ಶ್ರೀ ಶಾಂತಿನಾಥ ತೀರ್ಥಂಕರರ ಹಾಗೂ 108 ಕನಕ ಸಿದ್ಧಾಂತ ಕೀರ್ತಿ ಚಕ್ರವರ್ತಿ ನಿರ್ವಾಣಸ್ವಾಮಿ ದಿಗಂಬರರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಲಕ್ಕವಳ್ಳಿ ಜೈನ ಮಠದ ಸ್ವಸ್ತಿಶ್ರೀ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಜೈನ ಧರ್ಮವೂ ಒಂದು. ಅಲ್ಪಸಂಖ್ಯಾತ ಧರ್ಮಗಳಲ್ಲಿ ಗುರುತಿಸಿಕೊಂಡಿದ್ದರೂ ಸರ್ಕಾರ ಜೈನ ಮಠಗಳಿಗೆ ಅನುದಾನ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿ ಎಂದರು.

ಮುಖ್ಯಮಂತ್ರಿಗಳು ಹರಿಹರದ ಹರ ಜಾತ್ರೆಯಲ್ಲಿ ಮಠಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಅಳಿವಿನಂಚಿನಲ್ಲಿರುವ ನಮ್ಮ ಜೈನ ಮಠಗಳಿಗೆ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಪಸಂಖ್ಯಾತ ಮಠಗಳನ್ನು ನಿರ್ಲಕ್ಷಿಸಿದರೆ ಮುಂದೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರ ರಾಜ್ಯದ ಇತರ ಮಠಗಳಂತೆ ಜೈನ ಮಠಗಳನ್ನು ಅನುದಾನ ನೀಡಿ ಅಭಿವೃದ್ಧಿಗೊಳಿಸಬೇಕು. ರಾಜ್ಯದಲ್ಲಿ ಏಕೈಕ ಜೈನ ಮತದ ಶಾಸಕ ಅಭಯ್ ಪಾಟೀಲ್​ಗೆ ಮಂತ್ರಿಮಂಡಲದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮá-ಖಂಡರಾದ ಸೋಮಣ್ಣನರ್, ಹೊಸ ರಾಯಪ್ಪ , ಶಶಿಧರ ಗೌಡ, ರಾಮಣ್ಣ, ನೇಮಣ್ಣ, ಧರಣೇಂದ್ರ, ಸತೀಶ, ಶಂಕ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net