ಹುಬ್ಬಳ್ಳಿ: ಇಲ್ಲಿಯ ಜೈನ್ ಕಾಲೇಜ್ ವತಿಯಿಂದ ಇಂಟರ್ ಸ್ಕೂಲ್ ಫೆಸ್ಟ್ ಫ್ರೊನೆಸಿಸ್-2024 ಕಾರ್ಯಕ್ರಮವನ್ನು ಎರಡು ದಿನಗಳವರೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಯುಎಸ್ಎಫ್ ಫುಡ್& ಅಲೈಡ್ ಪ್ರೊಡಕ್ಟ್ ಲಿಮಿಟೆಡ್ ಸಿಇಒ ಹೇಮಲ್ ದೇಸಾಯಿ ಮಾತನಾಡಿ, ಕಾಲೇಜು ಜೀವನ ಕೇವಲ ಡಿಗ್ರಿ ಪಡೆಯುವುದಲ್ಲ. ವೈಯಕ್ತಿಕ ಬೆಳವಣಿಗೆ ಜತೆ ಕೌಶಲ ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳುವುದಾಗಿದೆ ಎಂದರು.
ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬಹುದು ಎಂದರು.
ಎರಡು ದಿನಗಳ ಉತ್ಸವದಲ್ಲಿ 220 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೊ. ನ್ಯಾನ್ಸಿ ಡವಳೆ ಸ್ವಾಗತಿಸಿದರು. ಪ್ರೊ. ಪನ್ನಾ ವಾರ್ಕರ್ ಪರಿಚಯಿಸಿದರು. ಜೈನ್ ಕಾಲೇಜು ಪ್ರಾಚಾರ್ಯ ಪ್ರೊ. ಮಾಯಾ ಕುಲ್ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಖುಷಿ ಲದ್ವಾ ವಂದಿಸಿದರು.