ಗಾಂಜಾ ಮಾರಾಟ ಮಾಡಿದ್ದವನಿಗೆ ಜೈಲು

High court logo
Published on

ಗೋಕರ್ಣ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ವೇಳೆ ಬಂಧಿತನಾಗಿದ್ದ ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಗೋಕರ್ಣ ತಾರಮಕ್ಕಿ ಗ್ರಾಮದ ಶಂಕರ ಕೃಷ್ಣಾ ಗೌಡ(24) ಶಿಕ್ಷೆಗೊಳಗಾದವ. 2020 ರಲ್ಲಿ ಆತನನ್ನು ಬಂಧಿಸಿದ ಗೋಕರ್ಣ ಪಿಎಸ್​ಐ ನವೀನ ನಾಯ್ಕ ಆರೋಪ ಪಟ್ಟಿ ಸಲ್ಲಿಸಿದ್ದರು. ಇನ್ಸ್​ಪೆಕ್ಟರ್ ವಸಂತ್ ಆಚಾರ್ ಅವರು ನ್ಯಾಯಾಲಯದ ಪ್ರಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಿ, ದಾಖಲೆ ಒದಗಿಸಿದ್ದರು. ಸರ್ಕಾರದ ಪರವಾಗಿ ಪಿಪಿ ತನುಜಾ ಹೊಸಪಟ್ಟಣ ಅವರು ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net