ಅಕ್ರಮ ವಲಸಿಗನಿಗೆ ಎರಡು ವರ್ಷ ಸಜೆ

court
Published on

ಮೂಡುಬಿದಿರೆ: ಸೂಕ್ತ ದಾಖಲೆಗಳಿಲ್ಲದೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಬಾಂಗ್ಲಾ ಪ್ರಜೆಗೆ ಮೂಡುಬಿದಿರೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಕ್ರಮ ವಲಸಿಗ, ಬಾಂಗ್ಲಾದೇಶದ ಪ್ರಜೆ ದುಲಾಲ್ ಬೈರಾಗಿ ಎಂಬಾತ ಮೂಡುಬಿದಿರೆ ತಾಲೂಕಿನ ಇರುವೈಲುನಲ್ಲಿ ಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸರು ಕಳೆದ ವರ್ಷ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ವಿಚಾರಣೆ ಸಂದರ್ಭ ಆರೋಪಿ ಅಕ್ರಮ ವಲಸಿಗನೆಂಬುದು ಸಾಬೀತಾಗಿದೆ. ಮೂಡುಬಿದಿರೆ ಜೆಎಂಎಫ್‌ಸಿ ನ್ಯಾಯಾಲಯ ಅಪರಾಧಿಗೆ ಎರಡು ವರ್ಷಗಳ ಸಜೆ ವಿಧಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶೋಭಾ ಎಸ್. ಆರೋಪಿ ವಿರುದ್ಧ ವಾದಿಸಿದರು. ಇಲ್ಲಿನ ಸಹಾಯಕ ಠಾಣಾಧಿಕಾರಿ ವಿನಾಯಕ ಬಾವಿಕಟ್ಟೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net