ಜೈ ಸಿನಿಮಾದ ಕಾಮಿಡಿ ಟೀಸರ್ ಬಿಡುಗಡೆ

mng-31oct-jai film
Published on


ಮಂಗಳೂರು : ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಸಿನಿಮಾದ ಕಾಮಿಡಿ ಟೀಸರ್ ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಬಿಡುಗಡೆಗೊಂಡಿತು. ಜೈ ಸಿನಿಮಾ ತುಳು ಮತ್ತು ಕನ್ನಡ ಭಾಷೆಯಲ್ಲಿ ನ.14 ರಂದು ತೆರೆ ಕಾಣಲಿದೆ.
ಹಳಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನಿರ್ದೇಶಕರು ತುಳು ಚಿತ್ರರಂಗದಲ್ಲಿ ಇದ್ದಾರೆ. ಅವರ ಮಾರ್ಗದರ್ಶನ ಮತ್ತು
ಅನುಭವ ಪಡೆದು ಸಿನಿಮಾ ನಿರ್ಮಿಸಿದ್ದೇವೆ. ಜೈ ಸಿನಿಮಾ ನನ್ನ ಕನಸು, ಶ್ರದ್ದೆ ಭಕ್ತಿ ಇಟ್ಟು ಸಿನಿಮಾ ಮಾಡಿದ್ದೇವೆ. ಈ ಸಿನಿಮಾಕ್ಕಾಗಿ ಬಹಳಷ್ಟು ಜನರು ಬೆವರು ಸುರಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ತಿಳಿಸಿದರು.
ರಿಕ್ಷಾ ಚಾಲಕರು ದೇವದಾಸ್ ಕಾಪಿಕಾಡ್ ಮತ್ತು ಅರವಿಂದ ಬೋಳಾರ್ ಅವರ ಮುಖವಾಡ ಧರಿಸಿದ ಕಲಾವಿದರೊಂದಿಗೆ ಟ್ಯಾಬ್ಲೋದೊಂದಿಗೆ ಪೆನ್ ಡ್ರೈವ್ ಹಿಡಿದುಕೊಂಡು ವೇದಿಕೆಗೆ ಬಂದು ವಿಭಿನ್ನವಾಗಿ ಟೀಸರ್ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ತಾರಾನಾಥ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಲಂಚುಲಾಲ್ ಕೆ.ಎಸ್, ಪಮ್ಮಿ ಕೊಡಿಯಾಲ್ಬೈಲ್, ಭೋಜರಾಜ ವಾಮಂಜೂರು, ಮಾಜಿ ಕಾರ್ಪೋರೇಟರ್ ದಿವಾಕರ ಪಾಂಡೇಶ್ವರ್, ಮಂಜುನಾಥ ಅತ್ತಾವರ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಕಲಾವಿದೆ ಜಯಶೀಲ, ಮಂಗೇಶ್ ಭಟ್ ವಿಟ್ಲ, ಪ್ರದೀಪ್ ಆಳ್ವ ಕದ್ರಿ, ಶ್ಯಾಮ್ ಕಹಳೆ, ಮಂಜುನಾಥ ಅತ್ತಾವರ, ಪ್ರೇಮ್ ಶೆಟ್ಟಿ ಸುರತ್ಕಲ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಉಪಸ್ಥಿತರಿದ್ದರು.
ಜೈ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ನ ಸಿನಿಮಾ ಆಗಿದ್ದು ಬಾಲಿವುಡ್ ನಟ ಸುನೀಲ್ ಶೆಟ್ಟಿ, ಡಾ.ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್.ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net