ಜೈ ಕಿಸಾನ್​ ಮಾರುಕಟ್ಟೆ ಬಂದ್​ ಮಾಡದಂತೆ ಒತ್ತಾಯ

29Anand1 protest
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 41;
Published on

ಬೆಳಗಾವಿ: ನಗರದ ಹೊರವಲಯದಲ್ಲಿರುವ ಜೈ ಕಿಸಾನ್​ ತರಕಾರಿ ಮಾರುಕಟ್ಟೆ ರೈತರಿಗೆ ಅನುಕೂಲಕರವಾಗಿದ್ದು, ಇದನ್ನು ಬಂದ್​ ಮಾಡದಂತೆ ಒತ್ತಾಯಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜೈ ಕಿಸಾನ್​ ತರಕಾರಿ ಮಾರುಕಟ್ಟೆಯು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವುದರಿಂದ ತರಕಾರಿ ಸಾಗಿಸಲು ಅನುಕೂಲವಾಗಿದೆ. ಜತೆಗೆ ಸರ್ಕಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರಿಂದ ಶೇ.8&15 ಕಮಿಷನ್​ ಪಡೆಯುತ್ತಿದ್ದಾರೆ. ಇದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಸ್ಪರ್ಧಾತ್ಮಕ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಖಾಸಗಿ ಮಾರುಕಟ್ಟೆ ಸ್ಥಾಪಿಸಲು ಅವಕಾಶ ನೀಡಿದೆ. ಅಧಿಕಾರಿಗಳು ರಾಜಕೀಯ ಒತ್ತಡದಿಂದ ಮಾರುಕಟ್ಟೆ ಬಂದ್​ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಜಗದೀಶ ಪಾಟೀಲ, ರಾಜಪ್ಪ ಪಾಟೀಲ, ಶಿವಪುತ್ರಯ್ಯ ಹಿರೇಮಠ, ಶಿವರಾಯಗೌಡ ಪಾಟೀಲ ಇತರರಿದ್ದರು.

ಮೇಯರ್​ಗೆ ಮನವಿ: ನಗರದ ಹೊರವಲಯದ ಜೆ ಕಿಸಾನ್​ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್​ ಮಾಡಬಾರದು ಎಂದು ಒತ್ತಾಯಿಸಿ ಮಾರುಕಟ್ಟೆಯ ವ್ಯಾಪಾರಿಗಳು ಮೇಯರ್​ ಮಂಗೇಶ ಪವಾರಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕೆಲವರು ಮಾರುಕಟ್ಟೆ ಮುಚ್ಚಲು ಹುನ್ನಾರ ನಡೆಸಿದ್ದಾರೆ. ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು ಎಂದು ಪಾಲಿಕೆ ಸದಸ್ಯ ಮುಜಮ್ಮಿಲ್​ ಡೋಣಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ, ಸರ್ಕಾದ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಮೇಯರ್​ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net