ದೆಹಲಿಗೆ ಕೊಣ್ಣೂರಿನ ಜೈ ಕಿಸಾನ್ ಕಲಾ ತಂಡ

24 NRD 1
Published on

ನರಗುಂದ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಭಾರತ್ ಪರ್ವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೂಕಿನ ಕೊಣ್ಣೂರಿನ ಪ್ರಕಾಶ ಚಂದನ್ನವರ ನೇತೃತ್ವದ ಜೈ ಕಿಸಾನ ಕಲಾ ತಂಡದ ಜೋಗತಿ ನೃತ್ಯ ಆಯ್ಕೆಗೊಂಡಿದೆ. ಜ.26ರಿಂದ ಜ.31ರವರೆಗೆ ನಡೆಯುವ ದೇಶದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಭಾರತ್ ಪರ್ವ-2025ರ ಕಾರ್ಯಕ್ರಮದಲ್ಲಿ ಜೋಗತಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಕಲಾ ತಂಡದ ಸದಸ್ಯರಾದ ಪಿ.ಕೆ. ಚಂದನ್ನವರ, ಐ.ಆರ್. ಬಾಳಪ್ಪನವರ, ಸಿ.ಬಿ. ಮ್ಯಾಗಲಮನಿ, ಪಿ.ಕೆ. ಕಡ್ಡಿ, ಎಸ್.ಆರ್. ಕಡ್ಡಿ, ಕೆ.ಎಂ. ಚಂದನ್ನವರ, ನಂದೀಶ ಗೀತಾ ಚಂದನ್ನವರ, ಸಾವಿತ್ರಿ ಹುಜರತ್ತಿ, ಆರ್.ಬಿ. ಚಿನಿವಾಲರ ಸೇರಿ ಒಟ್ಟು 10 ಜನರ ಕಲಾ ತಂಡದವರು ಕರ್ನಾಟಕದಿಂದ ಪ್ರತಿನಿಧಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net