ತಮಿಳು ಕಾಲನಿ ತೆರವು ಸಂಬಂಧ ಗೊಂದಲ: ಜೈ ಭೀಮ್ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ಆಕ್ಷೇಪ

Jai Bhim organization press conference Mandya
Published on

ಮಂಡ್ಯ: ನಗರದ ತಮಿಳು ಕಾಲನಿ ತೆರವು ಸಂಬಂಧ ಕೆಲ ಸಂಘಟನೆಗಳು ವಿನಃ ಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಜೈ ಭೀಮ್ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

1933ರಲ್ಲಿ ಕೆಆರ್‌ಎಸ್ ಕಟ್ಟಲು ಬಂದ ತಮಿಳರಿಗೆ ಮೈಸೂರು ಮಹಾರಾಜರು ಆ ಸ್ಥಳ ನೀಡಿದ್ದು, ಇದೀಗ ತೆರವುಗೊಳಿಸುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಥಳದ ಸಂಬಂಧ 1973ರಲ್ಲಿ ಮಂಡ್ಯ ನಗರಸಭೆಗೆ ಹಣ ಪಾವತಿ ಮಾಡಿದ್ದು, 1996ರಲ್ಲಿ ನ್ಯಾಯಾಲಯದ ಮೂಲಕ ಸ್ಥಳವು ತಮಿಳು ಕಾಲನಿಯ ನಿವಾಸಿಗಳಿಗೆ ಸೇರಬೇಕೆಂದು ಹೈಕೋರ್ಟ್ ಆದೇಶವೂ ನೀಡಿತ್ತು. ಆದರೆ 2015ರಲ್ಲಿ ತಮಿಳು ಕಾಲನಿಯರವರನ್ನು ಕೈಬಿಟ್ಟು ಸ್ಲಂ ಬೋರ್ಡ್ ಅನ್ನು ಪ್ರತಿವಾದಿಯಾಗಿಸಿ ಮಿಮ್ಸ್‌ಗೆ ಸ್ಥಳ ತೆರವು ಮಾಡಿಕೊಡಬೇಕೆಂಬ ಆದೇಶ ನೀಡಲಾಗಿತ್ತು. ಈ ನಡುವೆ ಕೆಲ ಸಂಘಟನೆಗಳು ಜನಜಾಗೃತಿ ಹೆಸರಿನಲ್ಲಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡುವ ತೀರ್ಪಿಗೆ ಬದ್ದರಿದ್ದೇವೆ. ಅನ್ಯಾಯವಾದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದರು.

ಬುದ್ಧ ಭಾರತೀಯ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಲಕ್ಷ್ಮಣ್ ಚೀರನಹಳ್ಳಿ, ಶ್ರೀನಿವಾಸ್, ಮೋಹನ್, ಸುರೇಶ್, ಶ್ರೀಕಾಂತ್, ಓಂಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net