ಜಾಗೃತಿ ಯಾನ ವಿಶೇಷ ಉಪನ್ಯಾಸ ಸಂವಿಧಾನದ ಹಕ್ಕುಗಳ ಸದುಪಯೋಗಿಸಿಕೊಳ್ಳಿ

Jagruti Yana Special Lecture Make the most of your constitutional rights
Published on

ವಿಜಯಪುರ:ನಮ್ಮ ದೇಶದ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು, ಸಂವಿಧಾನವು ದೇಶದ ನಾಗರಿಕರಿಗೆ ವಿವಿಧ ಹಕ್ಕುಗಳು ಮತ್ತು ಸ್ವಾತಂತ್ರ ನೀಡಿದೆ ಎಂದು ಸತ್ಯ ಶೋಧಕ ಸಂದ ಅಧ್ಯಕ್ಷ ಪರಶುರಾಮ ಮಹಾರಾಜನವರ್​ ಹೇಳಿದರು.ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಜ್ಯಶಾಸ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳು ಮತ್ತು ಸತ್ಯ ಶೋಧಕ ಸಂಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ಜಾಗೃತಿ ಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ನೀಡಿದ ಹಕ್ಕುಗಳನ್ನು ನಾವೆಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು. ಅಲ್ಲದೆ, ವ್ಯಕ್ತಿತ್ವ ವಿಕಸನ ಮಾಡಿಕೊಂಡು, ಸತಜೆಗಳಾಗಿ ಜೀವನ ರೂಪಿಸಿಕೊಂಡು ದೇಶದ ಏಳಿಗೆ ಮತ್ತು ಪ್ರಗತಿಗೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕೆಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎ.ಐ. ಹಂಜಗಿ ಮಾತನಾಡಿ, ನಾವೆಲ್ಲರೂ ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ, ಸಹೋದರತೆ, ಜಾತ್ಯಾತಿತ ಮನೋಭಾವನೆ ಮುಂತಾದ ಉದಾತ್ತ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಉಪನ್ಯಾಸಕರಾದ ವಲ್ಲಭ ಕಬಾಡೆ, ರಾಜಶ್ರೀ ಮಾರನೂರ, ಎಂ.ಎಸ್​. ಖೊದ್ನಾಪೂರ, ಐ.ಎಸ್​. ಶಿವಶರಣರ, ಎಸ್​.ಪಿ. ಚವಾಣ, ಎಸ್​.ಡಿ. ತೊಂಟಾಪೂರ, ವಿಶಾಲಾ ಹೊನ್ನಾಕಟ್ಟಿ, ಬಿ.ಎನ್​. ಶಾಡದಳ್ಳಿ, ಸಂತೋಷ ಕಬಾಡೆ, ಶಾಂತಪ್ಪ ಭಾವಿಕಟ್ಟಿ, ರೋಹಿಣಿ ಹಿರೇಶೆಡ್ಡಿ, ಚಂದ್ರಕಾಂತ ಬಿ., ಸಂಗಮೇಶ ಗುರವ, ರಾಜಶೇಖರ ಜೋಗೂರ, ಮಮತಾ ಬನ್ನೂರ, ಸಿದ್ರಾಮ ಯರನಾಳ, ಕೇಶವಮೂರ್ತಿ ಎಂ.ವಿ., ದ್ರಾಾಯಣಿ, ದೇವೇಂದ್ರಗೌಡ ಮತ್ತಿತರರಿದ್ದರು.

ಪ್ರೀತಿ ವಗ್ಗಿ ಮತ್ತು ರ್ಕಿತಿ ಸರಿಕರ ಪ್ರಾರ್ಥಿಸಿದರು. ಚಿದಾನಂದ ಆನೂರ ಸ್ವಾಗತಿಸಿದರು. ರಾಮಪ್ಪ ಕುರಿ ಪರಿಚಯಿಸಿದರು. ಶಿವಾನಂದ ಜಮಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುನೀಲ ಹತ್ತಿ ನಿರೂಪಿಸಿದರು. ಅಕ್ಷತಾ ಕೊಪ್ಪದ ವಂದಿಸಿದರು.

ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತದ ಸಂವಿಧಾನ ಜಾಗೃತಿ ಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪರಶುರಾಮ ಮಹಾರಾಜನವರ್​ ಮಾತನಾಡಿದರು. ಡಾ. ಎ.ಐ. ಹಂಜಗಿ, ಡಾ. ಚಿದಾನಂದ ಆನೂರ, ಶಿವಾನಂದ ಜಮಾದಾರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net