ಗ್ರಾಮ ಮಟ್ಟದ ಸಂವಿಧಾನ ಜಾಗೃತಿ ಜಾಥಾ

new jatha new
Published on

ಹುಬ್ಬಳ್ಳಿ : ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ವತಿಯಿಂದ ಹುಬ್ಬಳ್ಳಿ ತಾಲೂಕಿನ ಗ್ರಾಮ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಬೆಳಗಲಿ, ಕಟ್ನೂರ, ಚೆನ್ನಾಪೂರ, ಅಂಚಟಗೇರಿ ಮತ್ತು ದೇವರಗುಡಿಹಾಳ ಗ್ರಾಮ ಪಂಚಾಯಿತಿಗಳಲ್ಲಿ ಶುಕ್ರವಾರ ನೆರವೇರಿಸಲಾಯಿತು.

ಐದೂ ಗ್ರಾಮಗಳಲ್ಲಿ ತಳಿರು, ತೋರಣಗಳ ಮೂಲಕ ಶೃಂಗರಿಸಿ, ಬಣ್ಣಬಣ್ಣದ ರಂಗೋಲಿ ಹಾಕಿ ಆರತಿ ಬೆಳಗುವ ಮೂಲಕ ಕುಂಭಮೇಳದೊಂದಿಗೆ ಜಾಗೃತಿ ಜಾಥಾದ ಸ್ಥಬ್ಧ ಚಿತ್ರದ ವಾಹನವನ್ನು ಗ್ರಾಮಸ್ಥರು ಸ್ವಾಗತಿಸಿದರು.

ಸಂಬಾಳವಾಧ್ಯ, ಜಾಂಜ್ ಮೇಳ, ಕೋಲಾಟ, ಹೆಜ್ಜೆಯ ಕುಣಿತ, ಲೈಜಿಮ್ ಕುಣಿತ, ಡೊಳ್ಳು ಕುಣಿತದಂತಹ ಮೊದಲಾದ ಹೆಜ್ಜೆಮೇಳಗಳ ಜತೆಗೆ ಶಾಲಾ ಮಕ್ಕಳು ವಿವಿಧ ಮಹನೀಯರ ವೇಷ ಧರಿಸಿ ಸ್ಥಬ್ಧ ಚಿತ್ರಗಳನ್ನು ಗ್ರಾಮಗಳ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಜಾಗೃತ ಜಾತಾ ಸ್ಥಬ್ಧಚಿತ್ರ ಸಂಚರಿಸಿದ ಪ್ರತಿ ಗ್ರಾಮಗಳಲ್ಲಿ ಸೈಕಲ್ ರ್ಯಾಲಿ, ಬೈಕ್ ರ‍್ಯಾಲಿ

ಟ್ರಾ್ಯಕ್ಟರ್ ರ್ಯಾಲಿ, ಚಕ್ಕಡಿ ರ‍್ಯಾಲಿ ಮಾಡಲಾಯಿತು.

ಬೆಳಗಲಿಯಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಜವಳಿ, ಕಟ್ನೂರ ಮತ್ತು ಅಂಚಟಗೇರಿಯಲ್ಲಿ ಹುಬ್ಬಳ್ಳಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಡಾ.ಪ್ರಹ್ಲಾದ ಗೆಜ್ಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ವಿ. ಬಂಗಾರಿಮಠ, ಚೆನ್ನಾಪೂರ ಮತ್ತು ದೇವರಗುಡಿಹಾಳದಲ್ಲಿ ಉಪನ್ಯಾಸದ ನೀಡಿದರು.

ಜಗಜೊ್ಯೕತಿ ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಯಾವರೀತಿ ಅಳವಡಿಸಿದ್ದಾರೆ ಎಂಬುದರ ಬಗ್ಗೆ, ಮೂಲಭೂತ ಹಕ್ಕು ಮತ್ತು ಕರ್ತವ್ಯ ಗಳ ಬಗ್ಗೆ ಮಾತನಾಡಿದರು.

ಶಾಲಾಮಕ್ಕಳಿಂದ ವಿವಿಧ ನೃತ್ಯ, ದೇಶಭಕ್ತಿಗೀತೆ, ಕಿರುನಾಟಕ, ಏಕಾಭಿನಯ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ

ಚೆನ್ನಮ್ಮಅಂಬಿಗೇರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ನೌಕರರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಮಗಳ ಗುರುಹಿರಿಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net