ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಿ: ಎಸ್ಪಿ ಎನ್.ಯತೀಶ್ ಸಲಹೆ

13_09_Mdy_02(Helth Dept Program)
Published on

ಮಂಡ್ಯ: ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಂಡರೆ ಪರಿಹಾರ ಲಭಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸಲಹೆ ನೀಡಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರಾಗೃಹ ಹಾಗೂ ಮಿಮ್ಸ್‌ನ ಮನೋರೋಗ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಏನೇ ಸಮಸ್ಯೆಗಳಿದ್ದರೂ ನಿಮಗೆ ಆಪ್ತರೆನಿಸುವವರ ಬಳಿ ಹೇಳಿಕೊಳ್ಳಬಹುದು. ಅದರಿಂದ ಸಲಹೆಗಳು ಸಿಗುತ್ತವೆ. ಅದನ್ನು ಬಿಟ್ಟು ಆತ್ಮಹತ್ಯೆಯಂಥ ಕೆಟ್ಟ ಕೆಲಸಕ್ಕೆ ಮುಂದಾಗಬೇಡಿ. ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ಮಾನಸಿಕ ಒತ್ತಡ ಸೇರಿದಂತೆ ಕೆಲ ಕಾರಣದಿಂದಾಗಿ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ. ಅದರಲ್ಲಿಯೂ ಯುವಸಮೂಹದಲ್ಲಿಯೇ ಇಂಥ ಪ್ರಕರಣ ದಾಖಲಾಗುತ್ತಿದೆ. ಎಲ್ಲರಿಗೂ ಒಂದಲ್ಲ ಒಂದು ರೀತಿ ಒತ್ತಡ ಇರುತ್ತದೆ. ಅದನ್ನು ನಿಭಾಯಿಸುವ ಕೆಲಸ ಮಾಡಬೇಕು. ನಿಮ್ಮನ್ನು ನಂಬಿಕೊಂಡು ಇಡೀ ಕುಟುಂಬವೇ ಇರುತ್ತದೆ ಎನ್ನುವುದು ಗಮನವಿರಲಿ ಎಂದು ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಪಿ.ಅಶ್ವತ್ಥ್, ಡಾ.ಭವಾನಿಶಂಕರ್, ಡಾ.ಮಮತಾ, ಡಾ.ಶಶಿಧರ್, ಡಾ.ಆಶಾಲತಾ, ಡಾ.ಬಾಲಕೃಷ್ಣ, ಡಾ.ಭಾಗ್ಯವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net