ದೇಶಭಕ್ತಿ ಉಕ್ಕಿಸಿದ ಜಾಗೋ ಹಿಂದುಸ್ತಾನಿ, ಕಾಗಿರ್ಲ್ ವಿಜಯ ದಿವಸ ಸ್ಮರಣೀಯವಾಗಿಸಿದ ಕಾರ್ಯಕ್ರಮ

IMG-20240728-WA0021.jpg
Published on

ಹುಬ್ಬಳ್ಳಿ: ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ವತಿಯಿಂದ ಸ್ವರ್ಣ ಗ್ರುಪ್ ಆ್ ಕಂಪನೀಸ್ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಗಿರ್ಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ ದೇಶಭಕ್ತಿ ಉಕ್ಕಿಸಿತು.

ಅದರಲ್ಲೂ ಜಾಗೋ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮವು ಮಕ್ಕಳು, ಸಭೀಕರು ಕುಣಿದು ಕುಪ್ಪಳಿಸುವಂತೆ ಮಾಡಿತು.

ಟ್ರಾವಲ್ ಪಾರ್ಟನರ್ ವಿಜಯಾನಂದ ಟ್ರಾವೆಲ್ಸ್, ರೇಡಿಯೋ ಪಾರ್ಟನರ್ ರೆಡ್ ಎಫ್ ಎಂ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಸುಪ್ರಸಿದ್ದ ಸ್ವರನಿನಾದದ ಹತ್ತಕ್ಕೂ ಹೆಚ್ಚು ಸದಸ್ಯರ ತಂಡವು ಜಾಗೋ ಹಿಂದುಸ್ತಾನಿ ಸಂಗೀತ ಸಂಜೆ ಮೂಲಕ ಸುಮಾರು ಮೂರು ತಾಸು ಅನೇಕ ದೇಶ ಭಕ್ತಿಯ ಹಾಡುಗಳನ್ನು ಹಾಡುವ ಮೂಲಕ ಕೇಳುಗರ ಮೆಚ್ಚುಗೆ ಗಳಿಸಿದರು. ಹಲವು ಹಾಡುಗಳು ಪ್ರೇಕ್ಷಕರು ಎದ್ದು ಕುಣಿಯುವಂತೆ ಮಾಡಿದವು.

ಪ್ರತಿಯೊಂದು ಹಾಡಿಗೂ ಕೇಳುಗರು ಚಪ್ಪಾಳೆ ತಟ್ಟಿ ಸಂಗೀತಗಾರರನ್ನು ಹುರಿದುಂಬಿಸಿದರು. ಆ ಮೂಲಕ ತಮ್ಮ ದೇಶಭಕ್ತಿ ಪ್ರದಶಿರ್ಸಿದರು.

ಮಕ್ಕಳು, ಯುವಕರು ನೃತ್ಯ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಇತನಿ ಶಕ್ತಿ ಹಮೇ ದೇನ ಧಾತಾ, ಮನ್ ಕಾ ವಿಶ್ವಾಸ್ ಕಮಜೋರ್ ಹೋ…ನ…' ಹಾಡಿನೊಂದಿಗೆ ಹಾಡುಗಳ ಸರಣಿ ಆರಂಭಿಸಿದ ತಂಡದ ಸದಸ್ಯರು ಪ್ರತಿ ಹಾಡಿಗೂ ಚಪ್ಪಾಳೆ ಗಿಟ್ಟಿಸಿದರು. ತಂಡದ ಹಿರಿಯ ಸದಸ್ಯರು ಪ್ರತಿ ಹಾಡಿನ ಮೊದಲು ನೀಡುತ್ತಿದ್ದ ದೇಶದ ವಿಶೇಷತೆ, ಸ್ವಾತಂತ್ರ$್ಯ ಹೋರಾಟದ ದಿನಗಳ ಕುರಿತ ಮಾಹಿತಿ ಪ್ರೇಕ್ಷಕರ ಮನ ಗೆದ್ದಿತು. ದೇಶಪ್ರೇಮ ಬಡಿದೆಬ್ಬಿಸಿತು.

ಪ್ರತಿ ಹಾಡಿನ ಮೊದಲು ದೇಶದ ಸಂಸತಿ, ಪರಂಪರೆಯ ವಿಶೇಷತೆ ಸಾರುವ ಮಾಹಿತಿಯು ಹಾಡಿನ ಶ್ರೇಷ್ಠತೆ ಹೆಚ್ಚಿಸಿತು. ಹಿಂದುಸ್ತಾನ್ ಕಿತನಾ ಮಹಾನ್ ಹೈ ಎಂದು ವಣಿರ್ಸುತ್ತ… ಹಾಡಿದ ಸತ್ಯಂ ಶಿವ ಸುಂದರಂ… ಎಂಬ ಹಾಡು ಭಕ್ತಿಯ ಪ್ರಭೆ ಹರಿಸಿತು.

ಹೇ ರೀತ ಜಹಾ ಕೀ ರೀತ ಸದಾ, ಮೈ ಗೀತ ವಹಾ ಕೀ ಗಾತಾ ಹೂ, ಭಾರತ ಕಾ ರೆಹನೆ ವಾಲಾ ಹೂಂ, ಭಾರತ ಕಿ ಗೀತ ಗಾತಾ ಹೂ… ಹಾಡು ಎಲ್ಲರ ಮನ ತಟ್ಟಿತು.

ಮೊಳಗಿದ ಜಯಘೋಷ:
ಜಾಗೋ ಹಿಂದುಸ್ತಾನಿ ತಂಡದ ಪ್ರತಿಯೊಂದು ಹಾಡು ಪ್ರೇಕ್ಷಕರನ್ನು ಹುರಿದುಂಬಿಸಿದವು. ಹಾಡು ಮುಗಿಯುತ್ತಿದ್ದಂತೆ ಪ್ರೇಕ್ಷಕರು ಭೋಲೊ ಭಾರತ ಮಾತಾ ಕೀ ಜೈ, ವಂದೇ ಮಾತರಂ, ಜೈ ಜವಾನ್ ಜೈ ಕಿಸಾನ್ ಜಯಘೋಷಗಳನ್ನು ಮೊಳಗಿಸಿದರು. ಸಭಿಕರು ಚಪ್ಪಾಳೆ ತಟ್ಟಿ ಹಾಡುಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.

ದೇಶ ರಂಗೀಲಾ, ರಂಗೀಲಾ, ದೇಶ ಮೇರಾ ರಂಗೀಲಾ, ಸಾರೆ ಜಹಾಸೆ ಅಚ್ಚಾ, ಹಿಂದುಸಿತಾ ಹಮಾರಾ, ಜಹಾಂ ಡಾಲ ಡಾಲ ಪರ ಸೋನೆ ಕಿ ಚಿಡಿಯಾ ಕರ ತಿ ಬಸೇರಾ, ಓ ಭಾರತ ದೇಶ ಹೈ ಮೇರಾ… ಹಾಡುಗಳು ಭಾರತದ ವೈಭವವನ್ನು ಸಾರಿದವು.

ಮೇರಿ ದೇಶ ಕೀ ಧರತಿ ಸೋನಾ ಉಗಲೇ, ಉಗಲೇ ಹೀರೆ ಮೋತಿ, ಏ ದೇಶ ಹೈ ವೀರ ಜವಾನೋ ಕಾ, ಅಲಬೇಲೊ ಕಾ, ಏ ದೇಶ ಕೋ ಯಾರೊ ಕ್ಯಾ ಕೆಹನಾ… ಹಾಡುಗಳು ಸಭಾಂಗಣವೇ ಎದ್ದು ಕುಣಿಯುವಂತೆ ಮಾಡಿದವು.

ಜಾಗೋ ಹಿಂದುಸ್ತಾನಿ ತಂಡದ ಸದಸ್ಯರು ಕೂಡ ಹಾಡು ಹೇಳುತ್ತ ಸಭೀಕರ ಮಧ್ಯೆ ಆಗಮಿಸಿ ನೃತ್ಯದೊಂದಿಗೆ ಹಾಡು ಹೇಳಿದ್ದು, ಜತೆಗೆ ಪ್ರೇಕ್ಷಕರು ಜತೆಗೂಡಿ ಕುಣಿಯುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದರು.

ಹೊರಗೆ ಮಳೆಯ ಸಿಂಚನ:
ಭಾನುವಾರ ಬೆಳಗ್ಗೆಯಿಂದ ಒಂದಿಷ್ಟು ಬಿಡುವು ನೀಡಿದ್ದ ಮಳೆರಾಯ ಸಂಜೆ ಮತ್ತೆ ಸುರಿಯುವ ಮೂಲಕ ವಾತಾವರಣ ಮತ್ತಷ್ಟು ತಂಪಾಗಿಸಿದ. ಹೊರಗೆ ಮಳೆಯ ಸಿಂಚನ, ಸಭಾಂಗಣದ ಒಳಗೆ ಹಾಡುಗಳ ಸುರಿಮಳೆಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಮೇರಿ ಮಿಟ್ಟಿ ಮೇ ಮಿಲಜಾವಾ, ಗುಲ್ ಬನ್ ಕೆ ಮೈ ಕಿಲ್ ಜಾವಾ, ಇತನಿ ಸೀ ದಿಲ್ ಕಿ ಆರಜೂ, ಮೇರಾ ರಂಗ ದೇ ಬಸಂತಿ ಛೋಲಾ, ಮಾಹಿ ರಂಗ ದೇ ಸೇರಿ ಮುಂತಾದ ದೇಶಭಕ್ತಿ ಸಾರುವ ಹಿಂದಿ ಸಿನಿಮಾ ಹಾಡುಗಳು ಪ್ರೇಕ್ಷಕರು ಎಲ್ಲಿಯೂ ಎದ್ದು ಹೋಗದಂತೆ ಹಿಡಿದಿಟ್ಟವು. ಸ್ವಾತಂತ್ರ$್ಯ ಹೋರಾಟ ಹಾಗೂ ವೀರಯೋಧರ ಇತಿಹಾಸವನ್ನೂ ಕಾರ್ಯಕ್ರಮ ನೆನಪಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net