

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನ ಮಂತ್ರಿ ಡಾ. ಬಾಬುಜಗಜೀವನ ರಾಮ್ ಅವರ 116ನೇ ಜಯಂತ್ಯುತ್ಸವ ಆಚರಿಸಲಾಯಿತು.
ಮುಖ್ಯಶಿಕ್ಷಕ ಜಗದೀಶ ಗುಮಶೆಟ್ಟಿ ಮಾತನಾಡಿ, ರಾಷ್ಟ್ರದ ಆರ್ಥಿಕ ಬೆಳವಣಿಗೆ ಒಂದು ರೀತಿಯಲ್ಲಿ ಕೃಷಿ ಬೆಳವಣಿಗೆ ಆಗಿದೆ ಎಂಬುದನ್ನು ಅವರು ಮನಗಂಡಿದ್ದರು. ಕಾರ್ಮಿಕ ನಾಯಕರಾಗಿಯೂ ಜಗಜೀವನರಾಮ್ ಅವರು ಕೆಲಸ ಮಾಡಿದ್ದಾರೆ. ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಎಸ್.ಪಿ. ರಾಣಗಟ್ಟಿ, ಕೆ.ಎಸ್. ದೇಸಾಯಿ, ವಿ.ಟಿ. ಜಾನಮಟ್ಟಿ, ವಿಶ್ವನಾಥ ಸಿಂದಗಿ, ಎಸ್.ಎಸ್. ಕೋರವಾರ, ರವಿ ಕುಲಕರ್ಣಿ, ಬಸವರಾಜ ಕುಂಬಾರ, ಮಾಂತೇಶ ಅಗ್ನಿ ಇತರರಿದ್ದರು.