ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸಿದ ಕೃಷಿ ಮಂತ್ರಿ

06 hnl
Published on

ಹೊನ್ನಾಳಿ: ಒಂದು ಕಾಲದಲ್ಲಿ ಆಹಾರಕ್ಕಾಗಿ ಬೇರೆ ದೇಶವನ್ನು ಅವಲಂಬಿಸಿದ್ದ ಭಾರತ ಈಗ ಸ್ವಾವಲಂಬಿಯಾಗಿ ಇತರ ದೇಶಕ್ಕೆ ಆಹಾರ ಪೂರೈಕೆ ಮಾಡುವಷ್ಟು ಬೆಳೆದಿದೆ ಎಂದರೆ ಅದಕ್ಕೆ ಕಾರಣ ಆಗಿನ ಕೃಷಿ ಸಚಿವ ಬಾಬು ಜಗಜೀವನರಾಮ್ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಬಿಹಾರದ ಪುಟ್ಟ ಗ್ರಾಮದಲ್ಲಿ ಜನಿಸಿದ ಜಗಜೀವನ ರಾಮ್ ಕಷ್ಟಪಟ್ಟು ಶಿಕ್ಷಣ ಪಡೆದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲೂ ಛಾಪು ಒತ್ತಿದರು,. ಕೇಂದ್ರ ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಹರಿಕಾರ ಎನಿಸಿಕೊಂಡರು ಎಂದು ಸ್ಮರಿಸಿದರು. ದಲಿತ ಮುಖಂಡ ದಿಡಗೂರು ತಮ್ಮಣ್ಣ ಮಾತನಾಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಶಾಸಕರು, ಮುಖಂಡರು, ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಿರ್ಗಮಿಸಿದರು.

ದಲಿತ ಮುಖಂಡ ಮಾರಿಕೊಪ್ಪದ ಮಂಜಪ್ಪ ಸ್ವಾಗತಿಸಿದರು. ತಹಸೀಲ್ದಾರ್ ಪಟ್ಟರಾಜ ಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಮುಖಂಡರಾದ ಪ್ರಭಾಕರ್, ಸೊರಟೂರು ಹನುಮಂತಪ್ಪ, ಕುಳಗಟ್ಟೆ ಶೇಖರಪ್ಪ, ಶಾಂತರಾಜ್ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net