ಏ.5ಕ್ಕೆ ಹುನಗುಂದದಲ್ಲಿ ಜಗಜೀವನರಾಮ್ ಜಯಂತಿ

Jagjivan Ram Jayanti to be celebrated in Hunagunda on 5th April
Jagjivan Ram Jayanti to be celebrated in Hunagunda on 5th April
Published on

ಹುನಗುಂದ: ಬಾಬು ಜಗಜೀವನರಾಮ್ ಜಯಂತಿಯನ್ನು ಏ.5ರಂದು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನ ವಿವಿಧ ಇಲಾಖೆ ಮುಖ್ಯಸ್ಥರು ಪದೇಪದೆ ಪೂರ್ವಭಾವಿ ಸಭೆಗೆ ಗೈರು ಆಗಿರುವುದರ ಬಗ್ಗೆ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಆಗ ತಹಸೀಲ್ದಾರ್ ಮಧ್ಯಪ್ರವೇಶಿಸಿ, ಪ್ರತಿ ಇಲಾಖೆ ಮಖ್ಯಸ್ಥರು ಬೆಳಗ್ಗೆ 10.30ರ ಒಳಗಾಗಿ ಜಯಂತಿ ಆಚರಿಸಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸದಸ್ಯರಾದ ಚಂದ್ರು ತಳವಾರ, ಶಾಂತಾ ಮೇಲಿನಮನಿ, ಮುಖಂಡರಾದ ಬಸವರಾಜ ಕಿರಸೂರ, ಮಾರುತಿ ಭಾವಿಕಟ್ಟಿ, ರಾಘು ಬಿಸನಾಳ, ಶಾಂತು ಮೂಕಿ, ವಿಜಯ ಭಾವಿಕಟ್ಟಿ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್-2 ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಟ್ಟಿಮನಿ, ಪುರಸಭೆಯ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net