ಅ.6ಕ್ಕೆ ಜಗ್ಗಣಕ್ಕ ಸಂಗೀತ ಸುಗ್ಗಿ

ಕೋಲಾರದಲ್ಲಿ ಅ.6ರಂದು ಆಯೋಜಿಸಿರುವ ಜಾನಪದ ಸಂಗೀತ ಸುಗ್ಗಿ ಪ್ರಯುಕ್ತ ಸುದ್ದಿಗೋಷ್ಠಿಯಲ್ಲಿ ಜಾನಪದ ಕಲಾವಿದ ಗೋ.ನಾ.ಸ್ವಾಮಿ ಅವರು ಮಾತನಾಡಿದರು. ಸಮಾಜ ಸೇವಕ ಸಿ.ಎಂ.ಆರ್​.ಶ್ರೀನಾಥ್​, ಹಿರಿಯ ಪತ್ರಕರ್ತ ವಿ.ಮುನಿರಾಜು, ಕಲಾವಿದ ಮತ್ತಿಕುಂಟೆ ಕೃಷ್ಣ ಇದ್ದರು.
12
ಕೋಲಾರದಲ್ಲಿ ಅ.6ರಂದು ಆಯೋಜಿಸಿರುವ ಜಾನಪದ ಸಂಗೀತ ಸುಗ್ಗಿ ಪ್ರಯುಕ್ತ ಸುದ್ದಿಗೋಷ್ಠಿಯಲ್ಲಿ ಜಾನಪದ ಕಲಾವಿದ ಗೋ.ನಾ.ಸ್ವಾಮಿ ಅವರು ಮಾತನಾಡಿದರು. ಸಮಾಜ ಸೇವಕ ಸಿ.ಎಂ.ಆರ್​.ಶ್ರೀನಾಥ್​, ಹಿರಿಯ ಪತ್ರಕರ್ತ ವಿ.ಮುನಿರಾಜು, ಕಲಾವಿದ ಮತ್ತಿಕುಂಟೆ ಕೃಷ್ಣ ಇದ್ದರು.
Published on

29ರಂದು ಆಯ್ಕೆ ಪ್ರಕ್ರಿಯೆ - ಅಂತಾರಾಷ್ಟ್ರೀಯ ಗಾಯಕ ಗೋ.ನಾ.ಸ್ವಾಮಿ ಮಾಹಿತಿ



ಕೋಲಾರ: ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜಾನಪದ ಸಂಗೀತ ಸುಗ್ಗಿಯನ್ನು ನಗರದ ಸಿ.ಬೈರೇಗೌಡ ನಗರದ ಮೈದಾನದಲ್ಲಿ ಅ.6ರಂದು ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಸಮಾಜ ಸೇವಕ ಸಿಎಂಆರ್​ ಶ್ರೀನಾಥ್​ ನೇತೃತ್ವದಲ್ಲಿ ಜಗ್ಗಣಕ್ಕ ಜಾನಪದ ಹಾಡುಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕ ಹಾಗೂ ನಿರೂಪಕ ಗೋ.ನಾ.ಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸೆ.29ರಂದು ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ (ಆಡಿಷನ್​) ನಡೆಯಲಿದೆ. ಉಚಿತ ಪ್ರವೇಶವಿದ್ದು, ಜಾನಪದ ಗಾಯಕರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಅಲ್ಲಿ ಆಯ್ಕೆಯಾದವರು ಅ.6ರ ವೇದಿಕೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುವುದು. ವಿಶೇಷ ಬಹುಮಾನ ಇರಲಿದ್ದು, ವೇದಿಕೆ ಕಾರ್ಯಕ್ರಮವು ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಆಸಕ್ತರು
ಭಾಗವಹಿಸಬಹುದು ಎಂದು ತಿಳಿಸಿದರು.
ಜಾನಪದ ಕಲೆಯ ಉಳಿವಿಗಾಗಿ ಸಂಗೀತ ಸುಗ್ಗಿಯು, ವಿನೂತನ ಜಾನಪದ ಕಾರ್ಯಕ್ರಮವಾಗಿದ್ದು, ಕೋಲಾರದಲ್ಲಿ ಪ್ರಥಮ ಬಾರಿಗೆ ಜಾನಪದ ಜಗ್ಗಣಕ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ರಾಜ್ಯದ 152 ತಾಲೂಕುಗಳಲ್ಲೂ ಏರ್ಪಡಿಸುವ ಯೋಜನೆ ಇದೆ. ಉತ್ತರ ಕರ್ನಾಟಕ ಭಾಗದಲ್ಲೂ ಜಾನಪದ ಛಾಪು ಹೆಚ್ಚಲು 10 ವರ್ಷಗಳ ಕಾಲ ಆಂದೋಲನದ ರೀತಿ ನಡೆಯಲಿದೆ ಎಂದು ತಿಳಿಸಿದರು.
ಸಮಾಜ ಸೇವಕ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಜಿಲ್ಲೆಯ ಹೆಮ್ಮೆ ಗೋ.ನಾ.ಸ್ವಾಮಿ ದೇಸಿ ಕಲೆಯ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಈ ಜಾನಪದದಲ್ಲಿ ಆಧುನಿಕ ಸಂಗೀತ ಸಂಯೋಜನೆಗೊಂಡಿದೆ. ಜಾನಪದ ಕಲೆ ಉಳಿಸಿ&ಬೆಳೆಸಿ ಪ್ರೋತ್ಸಾಹಿಸುತ್ತಿದ್ದಾರೆ. ಜಿಲ್ಲೆ ಮೇಲೆ ವಿಶೇಷ ಕಾಳಜಿ ಹೊಂದಿದ್ದಾರೆ. ಇಂಥ ಕಲೆಯನ್ನು ನಾವು ಪ್ರೋತ್ಸಾಹಿಸಬೇಕು. ಹೆಚ್ಚಿನ ಜನ ಸೇರಿ ಕಲಾವಿದರು ಬೆಳೆಯಲು ಸಹಕಾರ ನೀಡಬೇಕು ಎಂದರು. ಆಯ್ಕೆ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗೆ ಸುಧಾಕರ್​& ಮೊ.8050533199 ಹಾಗೂ ಕುಮಾರ್​& ಮೊ.8892209188 ಸಂಪರ್ಕಿಸಬಹುದು ಎಂದು ಕಲಾವಿದ ಗೋ.ನಾ.ಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net